ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಇಂಡಿಯನ್ ಸೈನ್ ಲ್ಯಾಂಗ್ವೇಜ್‌ಗೆ ಸಹಾಯಕವಾಗಿ ಜೆಸ್ಚರ್ ಗ್ಲೌಸ್‌ನ ಅಭಿವೃದ್ಧಿ

ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳಾದ ಅರ್ಜುನ್ ಶೆಣೈ, ಮಧುಸೂದನ್ ಎಸ್, ಪ್ರೀತಂ ವಿ ಅಮಿನ್ ಮತ್ತು ರಾಹುಲ್ ರಘುನಾಥ ಶೆಟ್ಟಿಗಾರ್ ಇವರು ವಿಭಾಗದ ಪ್ರಾಧ್ಯಾಪಕರಾದ ಡಾ. ಪುನೀತ್ ಬೇಕಲ್ ಇವರ ಮಾರ್ಗದರ್ಶನದಲ್ಲಿ ಶ್ರವಣ ಮತ್ತು ವಾಕ್ ದೋಷ
ಹೊಂದಿರುವ ಮಕ್ಕಳಿಗಾಗಿ “ಮಿತ್ರ” ಎಂಬ ಜೆಸ್ಚರ್ ಗ್ಲೌಸ್‌ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಇದು ಭಾರತೀಯ ಸೈನ್ ಲ್ಯಾಗ್ವೇಜ್ ಜೆಸ್ಚರನ್ನು ಗುರುತಿಸಿ ಪಠ್ಯ ಹಾಗೂ ಧ್ವನಿಯಾಗಿ ಪರಿವರ್ತಿಸುತ್ತದೆ. ಈ ವ್ಯವಸ್ಥೆಯು ಸಂವಹನ ಅoತರವನ್ನು ಕಡಿಮೆ ಮಾಡಿ ಶ್ರವಣ ಮತ್ತು ಮಾತಿನ ಅಸಮರ್ಥತೆ ಹೊಂದಿರುವ ವ್ಯಕ್ತಿಗಳಿಗೆ ದಿನನಿತ್ಯದ ಸಂವಹನದಲ್ಲಿ ಸಹಾಯಮಾಡುತ್ತದೆ ಹಾಗೂ ಇದರ ತಯಾರಿಯು ಕಡಿಮೆ ವೆಚ್ಚದ್ದಾಗಿದ್ದು, ಸುಲಭವಾಗಿ ಹೊತ್ತೊಯ್ಯ ಬಹುದಾಗಿದೆ. ಈ ಯೋಜನೆಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಅನುಮೋದನೆ ದೊರೆತಿದೆ.