ಉಡುಪಿ: ಅಂಬಲಪಾಡಿ ದೇವಸ್ಥಾನಕ್ಕೆ ಮಾಜಿ‌ ಪ್ರಧಾನಿ‌ ದೇವೇಗೌಡರ ಭೇಟಿ

ಉಡುಪಿ: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಬೆಂಗಳೂರಿಗೆ ವಾಪಾಸಾಗುವ ಮುನ್ನ ಉಡುಪಿಯ ಪ್ರಸಿದ್ದ ಶಕ್ತಿ ಕ್ಷೇತ್ರ ಅಂಬಲಪಾಡಿ ಮಹಾಕಾಳಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿದ್ದಾರೆ. 
ದೊಡ್ಡಗೌಡರ ದೇವಾಲಯ ಭೇಟಿಗೆ ಒಂದು ದಿನ ಮುಂಚಿತವಾಗಿ ಪತ್ನಿ ಚೆನ್ನಮ್ಮ ಈ ಕ್ಷೇತ್ರದಲ್ಲಿ ಸರ್ವ ಕುಟುಂಬ ಸದಸ್ಯ ಹೆಸರಿನಲ್ಲಿ ಪೂಜೆ ಸಲ್ಲಿಸಿದ್ದರು. ಅನಂತರ ಪತ್ನಿಯ ಒತ್ತಾಯದ ಮೇರೆಗೆ ಗೌಡರೂ ದೇವಸ್ಥಾನಕ್ಕೆ ಭೇಟಿ ನೀಡಿ ಜನಾರ್ದನ ಮತ್ತು ಮಹಾಕಾಳಿದ ದರ್ಶನ ಕೈಗೊಂಡಿದ್ದಾರೆ.  
ದೇವಾಲಯದ ವತಿಯಿಂದ ವಿಶೇಷ ಪ್ರಾರ್ಥನೆ ನಡೆಸಿ ಗೌಡರ ಕುಟುಂಬದ ಶ್ರೇಯಸ್ಸಿಗೆ ಪ್ರಾರ್ಥಿಸಲಾಯಿತು. ಮೇ. 24 ರಂದು, ಚುನಾವಣಾ ಫಲಿತಾಂಶ ಬರುವ ಮರುದಿನಕ್ಕೆ ಅಂಬಲಪಾಡಿ ದೇವಸ್ಥಾನದಲ್ಲಿ ಸರ್ವಸೇವೆ ನಡೆಸಲು ಈಗಾಗಲೇ ದೇವೇಗೌಡರು ಚೀಟಿ ಮಾಡಿಸಿದ್ದಾರೆ.