ಉಡುಪಿ: ಈ ಬಾರಿ ದೀಪಾವಳಿಯಂದೇ ಖಂಡಗ್ರಾಸ ಸೂರ್ಯಗ್ರಹಣವಿರುವುದರಿಂದ ಅಂಗಡಿ ಪೂಜೆ ಮುಂತಾದವುಗಳನ್ನು ಸೋಮವಾರದಂದು ಸಂಜೆ ಮಾಡಿದಲ್ಲಿ ಪ್ರಶಸ್ತವಾಗಿರುತ್ತದೆ.
ದೀಪಾವಳಿ ಹಬ್ಬದ ಧಾರ್ಮಿಕ ವಿಧಿ ವಿಧಾನಗಳು:
ಅ.23 ಭಾನುವಾರದಂದು ಸಂಜೆ ಗಂಗಾ ಸ್ಮರಣ ಪೂಜಾ, ಜಲಪೂರಣ. ನೀರು ತುಂಬುವುದು.
ಅ. 24 ರಂದು ಸೋಮವಾರ ತೈಲಾಭ್ಯಂಜನ, ನರಕಚತುರ್ದಶಿ. ದೀಪಾವಳಿ, ಧನ -ಧಾನ್ಯ -ಲಕ್ಷ್ಮೀಪೂಜೆ, ಬಲಿಂದ್ರ ಪೂಜೆ.
ಅ. 25 ಮಂಗಳವಾರ ಬೆಳಿಗ್ಗೆ ಗೋಪೂಜೆ; ಸಂಜೆ ಖಂಡಗ್ರಾಸ ಸೂರ್ಯಗ್ರಹಣ ಸ್ಪರ್ಶ ಕಾಲ: ಸಾಯಂಕಾಲ ಗಂ.5.06 ನಿಮಿಷ; ಗ್ರಹಣ ಮೋಕ್ಷ: ಸಾಯಂಕಾಲ ಗಂ.6.27 ನಿಮಿಷ. ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಕೇತು ಗ್ರಹಣವು ಸಂಭವಿಸುವುದು. ಗ್ರಹಣ ಸಮಯದಲ್ಲಿ ಗ್ರಹಣ ಶಾಂತಿ ಹಾಗೂ ಜಪ ತಪ ಅನುಷ್ಠಾನ ವಿಷ್ಣು ಸಹಸ್ರ ನಾಮ ಪಠಣ ಮಾಡುವುದು ಉತ್ತಮ. ಈ ದಿನ ಉಪಹಾರ ಮಾತ್ರ, ಭೋಜನ ಇಲ್ಲ, ಉಪಹಾರ ಮಧ್ಯಾಹ್ನ 2 ಘಂಟೆ ಒಳಗೆ ನಂತರ ಆಹಾರ ಸೇವನೆ ಇಲ್ಲ. ಗ್ರಹಣ ಮೋಕ್ಷ ನಂತರ ನಂತರ ಬಾಲ ವೃದ್ದ ಅಶಕ್ತರು ಉಪಹಾರ ಸ್ವೀಕರಿಸಬಹುದು.
ಅ.26 ರಂದು ಬುಧವಾರ ಬಲಿಪಾಡ್ಯಮಿ.
ಮಾಹಿತಿ: ಜನಾರ್ದನ ಅಡಿಗ/https://mogeripanchangam.in/