ಹಿರಿಯಡ್ಕ: ಇಲ್ಲಿನ ಬೊಮ್ಮರಬೆಟ್ಟು ಗ್ರಾಮದ ಕೊಲ್ಯಾರುವಿನಲ್ಲಿ ಡಿ. 9ರಂದು ವ್ಯಕ್ತಿಯೊಬ್ಬರ ಮನೆ ಕೊಟ್ಟಿಗೆಗೆ ಬೆಂಕಿ ಬಿದ್ದದ್ದರಿಂದ ಮನನೊಂದು ಆತ್ಯಹತ್ಯೆಗೆ ಶರಣಾದ ಘಟನೆ ನಡೆದಿದೆ.
ಕೊಲ್ಯಾರುವಿನ 59 ವರ್ಷದ ಶಾಂತೇಶ್ ಶೆಟ್ಟಿ ಮೃತರಾದವರು. ಇವರ ಮನೆಯ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಹೋಗಿತ್ತು. ಕೊಟ್ಟಿಗೆಯಲ್ಲಿದ್ದ ತೆಂಗಿನಕಾಯಿ ಮತ್ತು ಬೈಹುಲ್ಲು ಅಗ್ನಿಗಾಹುತಿಯಾಗಿದ್ದವು. ಇದರಿಂದ ಮಾನಸಿಕವಾಗಿ ಖಿನ್ನನಾದ ಶಾಂತೇಶ್ ಡಿ.11 ರ ರಾತ್ರಿ 10 ಗಂಟೆಯಿಂದ ಡಿ.12 ರ ಬೆಳಗ್ಗಿನ ಜಾವದ ಒಳಗೆ ಮನೆಯ ಹಿಂದಿದ್ದ ಹಲಸಿನ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.