ಉಡುಪಿ: ಕಸ್ತೂರ್ಬಾ ಆಸ್ಪತ್ರೆ ಸಮೂಹ ಮಣಿಪಾಲ ಹಾಗೂ ಉಡುಪಿ ಜಿಲ್ಲಾ ಭಾರತೀಯ ದಂತ ವೈದ್ಯಕೀಯ ಸಂಘದ ಜಂಟಿ ಆಶ್ರಯದಲ್ಲಿ ನಗರದ ಓಷನ್ ಪರ್ಲ್ ಹೋಟೆಲ್ನಲ್ಲಿ ರಾಜ್ಯಮಟ್ಟದ ಮಾಹಿತಿ ಕಾರ್ಯಾಗಾರ ನಡೆಯಿತು.
ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಮೋನಿಕಾ ಸೋಲೋಮೋನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಶುಭಹಾರೈಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಶ್ರೀಕಾಂತ್ ಹಾಗೂ ಡಾ. ಆದರ್ಶ್ ಕುಡ್ವ ಭಾಗವಹಿಸಿ ದಂತ ಚಿಕಿತ್ಸೆಯಲ್ಲಿ ಎದುರಾಗುವ ಸವಾಲುಗಳು ಮತ್ತು ಆಧುನಿಕ ಚಿಕಿತ್ಸೆ ವಿಧಾನಗಳ ಬಗ್ಗೆ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.
ಕಸ್ತೂರ್ಬಾ ಆಸ್ಪತ್ರೆಗಳ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಚಿನ್ ಕಾರಂತ್ ಹಾಗೂ ಸಂಘದ ಪೂರ್ವಾಧ್ಯಕ್ಷರಾದ ಡಾ. ವಿಜಯೇಂದ್ರ ರಾವ್, ಡಾ.ಗುರುರಾಜ್, ಡಾ. ಮನೋಜ್ ಮ್ಯಾಕ್ಸಿಮ್ ಡಿ ’ಲೀಮ್, ಡಾ. ಗಣೇಶ್ ಕಾಮತ್, ಡಾ. ಪ್ರಮೋದ್ ಶೆಟ್ಟಿ, ಕಾರ್ಯಗಾರ ಸಂಯೋಜಕ ಡಾ. ಬೀಸು ನೈಕ್ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಭಾರತೀಯ ದಂತ ವೈದ್ಯಕೀಯ ಸಂಫದ ಅಧ್ಯಕ್ಷ ಡಾ. ಸತೀಶ್ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಡಾ. ಜಗದೀಶ್ ಜೋಗಿ ವಂದಿಸಿದರು.