ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಹೀಗಾಗಿ ಡೆಂಗ್ಯೂ ಬಗ್ಗೆ ಎಚ್ಚರಿಕೆ ವಹಿಸುವಂತೆ ವೈದ್ಯರು ಹೇಳಿದ್ದಾರೆ. ಡೆಂಗ್ಯೂ ಹೆಚ್ಚಾಗಿ ಹರಡುವುದು ಮಳೆಗಾಲದ ಆರಂಭದಲ್ಲಿ, ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತಿದ್ದು, ಸೊಳ್ಳೆಗಳು ಮೊಟ್ಟೆ ಇಡಲು ಅನುವು ಮಾಡಿಕೊಟ್ಟಿದೆ.
ಇದರಿಂದ ಡೆಂಗ್ಯೂ ಜ್ವರದ ಭೀತಿ ಎದುರಾಗಿದೆ.
ಬೆಂಗಳೂರಿನಲ್ಲಿ 300 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಹೀಗೆ ನಿರಂತರ ಮಳೆಯಾದರೆ ಈ ಸಂಖ್ಯೆ ಇನ್ನಷ್ಟು ಅಧಿಕವಾಗುವ ಸಾಧ್ಯತೆ ಇದೆ. ಡೆಂಗ್ಯೂ ಜ್ವರ ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಹೇಳಿದ್ದಾರೆ.
ಹೆಣ್ಣು ಸೊಳ್ಳೆಯಿಂದ ಡೆಂಗ್ಯೂ ಡೆಂಗ್ಯೂ
ಡೆಂಗ್ಯೂ ರೋಗವು ಈಡಿಸ್ ಈಡಿಪ್ಟಿ ಎಂಬ ಹೆಣ್ಣು ಸೊಳ್ಳೆಯಿಂದ ಬರುತ್ತದೆ. ಈ ಸೋಂಕಿತ ಸೊಳ್ಳೆ ವ್ಯಕ್ತಿಯನ್ನ ಕಚ್ಚಿದ ನಂತ್ರ ಸೋಂಕಿತ ವೈರಸ್’ನ್ನ ಅವನ ದೇಹದಲ್ಲಿ ಬಿಡುತ್ತದೆ. ಡೆಂಗ್ಯೂ ಬಂದಾಗ ರಕ್ತದಲ್ಲಿನ ಪ್ಲೇಟ್ಲೆಟ್ಗಳು ವೇಗವಾಗಿ ಕಡಿಮೆಯಾಗುತ್ವೆ. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು 1.5 ಲಕ್ಷದಿಂದ 4.5 ಲಕ್ಷದವರೆಗೆ ಪ್ಲೇಟ್ಲೆಟ್ಗಳನ್ನ ಹೊಂದಿರಬೇಕು, ಆದರೆ ಡೆಂಗ್ಯೂನಲ್ಲಿ, ಇದು ಬಹಳ ವೇಗವಾಗಿ ಕಡಿಮೆಯಾಗುತ್ತದೆ, ಕೆಲವೊಮ್ಮೆ ಕೇವಲ 10 ರಿಂದ 20 ಸಾವಿರ ಪ್ಲೇಟ್ಲೆಟ್ಗಳು ರೋಗಿಯಲ್ಲಿ ಉಳಿಯುತ್ತವೆ. ಇದು ದೇಹದ ವಿವಿಧ ಭಾಗಗಳಿಂದ ರಕ್ತಸ್ರಾವದ ಅಪಾಯವನ್ನ ಹೆಚ್ಚಿಸುತ್ತದೆ. ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಳ್ಳಲು 5 ರಿಂದ 7 ದಿನಗಳು ಬೇಕಾಗುತ್ತದೆ.