ಮಂಗಳೂರು: ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿರುವ ಹೈಡ್ರೋಜನ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಹೈಡ್ರೋಜನ್ ನಾವಿನ್ಯತೆ ದಿನಾಚರಣೆ ಹಿನ್ನೆಲೆ ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಪ್ರಾತ್ಯಕ್ಷಿಕೆಯ ಕಾರ್ಯಕ್ರಮವು ಏ.9 ರಂದು ನಡೆಯಿತು.
ಹೈಜನ್ ಸಂಸ್ಥೆಯ ನಿರ್ದೇಶಕ ಡಾ.ಮಾಣಿಪ್ಪಾಡಿ ಕೃಷ್ಣಕುಮಾರ್ ಮಾತನಾಡಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನೀರಿನಿಂದ ಹೈಡ್ರೊಜನ್ ತಯಾರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಮುಖ್ಯ ಭೂಮಿಕೆಗೆ ಬರಲಿದೆ. ಕಾರ್ಖಾನೆಗಳಲ್ಲಿ ಆರಂಭಿಕ ಹಂತದಲ್ಲಿ ಹಸುರು ಹೈಡ್ರೋಜನ್ ಬಳಸಲು ಒತ್ತು ನೀಡುಲಾಗುತ್ತಿದೆ ಎಂದರು.
ಹೈಜನ್ ಚೇರ್ಮನ್ ಡಾ.ಮೈಕಲ್ ಗ್ರೇಸಿಸ್ ಮಾತನಾಡಿ ಸೋಲಾರ್ ವಿಂಡ್ ಹೈಡ್ರೋ ಪವರ್ ದೇಶದಲ್ಲಿ ಲಭ್ಯವಿದೆ ಆದರೆ ಇವುಗಳನ್ನು ನೇರವಾಗಿ ಸಂಗ್ರಹಿಸಿಡುವ ವ್ಯವಸ್ಥೆ ಇಲ್ಲ ಹೈಡ್ರೋಜನ್ ಸಂಗ್ರಹಿಸಿಡಲು ಸಾಧ್ಯವಿದೆ. ರಸಗೊಬ್ಬರ,ಉಕ್ಕು, ರಾಸಾಯನಿಕಗಳು ಹಾಗೂ ಸಂಸ್ಕರಣಾ ವಲಯಗಳಿಗೆ ಹೈಡ್ರೋಜನ್ ಭವಿಷ್ಯದ ಶಕ್ತಿ ಹಸಿರು ಇಂಧನಕ್ಕೆ ಪೂರಕವಾಗಿ ಹೈಡ್ರೋಜನ್ ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಮ್ಯಾನೇಜಿಂಗ್ ಪಾರ್ಟ್ನರ್ ಶೋಯಬ್ ಮಾತನಾಡಿ ಸೋಲಾರ್ ವಿಂಡ್ ಹೈಡ್ರೋ ಪವರ್ ದೇಶದಲ್ಲಿ ಲಭ್ಯವಿದೆ ಆದರೆ ಇವುಗಳನ್ನು ನೇರವಾಗಿ ಸಂಗ್ರಹಿಸಿಡುವ ವ್ಯವಸ್ಥೆ ಇಲ್ಲ ಹೈಡ್ರೋಜನ್ ಸಂಗ್ರಹಿಸಿಡಲು ಸಾಧ್ಯವಿದೆ. ರಸಗೊಬ್ಬರ,ಉಕ್ಕು, ರಾಸಾಯನಿಕಗಳು ಹಾಗೂ ಸಂಸ್ಕರಣಾ ವಲಯಗಳಿಗೆ ಹೈಡ್ರೋಜನ್ ಭವಿಷ್ಯದ ಶಕ್ತಿ. ಹಸಿರು ಇಂಧನಕ್ಕೆ ಪೂರಕವಾಗಿ ಹೈಡ್ರೋಜನ್ ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಹೈಡ್ರೋಜನ್ ಇನ್ನೋವೇಶನ್ ಪ್ರೈವೇಟ್ ನ ತಯಾರಿಕ ಘಟಕ ಮಂಗಳೂರಿನ ಸಹ್ಯಾದ್ರಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ ಇದರಲ್ಲಿ ಹೈಡ್ರೋಜನ್ ಗ್ಯಾಸ್ ತಯಾರಿಸಲು ಬೇಕಾದ ಉಪಕರಣವಾದ ಎಲೆಕ್ಟ್ರಾಲೈಸರ್ ಗಳನ್ನು ತಯಾರಿಸಿ ಪರೀಕ್ಷಿಸಲಾಗುತ್ತಿದೆ. ದೇಶದಲ್ಲಿ 25 ಕಿಲೋ ವ್ಯಾಟ್ ಘಟಕ ಅನ್ವೇಷಣೆ ಇದೇ ಮೊದಲ ಬಾರಿಗೆ ಮಾಡಲಾಗಿದೆ. ಹೈಡ್ರೋಜನ್ ತಯಾರಿಸುವ ವೇಳೆ ಹಸಿರು ಆಕ್ಸಿಜನ್ ಸಂಗ್ರಹವಾಗುತ್ತಿದ್ದು ಅವುಗಳನ್ನು ಆದ್ಯತೆಯ ಮೇರೆಗೆ ಬಳಸಲು ಅವಕಾಶವಿದೆ ನೀರಿನಿಂದ ಹೈಡ್ರೋಜನ್ ಹಾಗೂ ಆಕ್ಸಿಜನ್ ಪ್ರತ್ಯೇಕಿಸುವ ಎಲೆಕ್ಟ್ರಾಲೈಸರ್ ಘಟಕವನ್ನು
ಸಂಸ್ಥೆಯ ಮೂಲಕ ಸೈಹಾದ್ರಿ ಆವರಣದಲ್ಲಿ ತಯಾರಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ವಿಧಾನದಲ್ಲಿ ಪ್ರತಿ ಕೆಜಿ ಹೈಡ್ರೋಜನ್ ತಯಾರಿಸುವ ವೇಳೆ 9 ಕೆಜಿ ಇಂಗಾಲವನ್ನು ಪರಿಸರಕ್ಕೆ ಬಿಡುಗಡೆಗೊಳಿಸುತ್ತಿದೆ ಆದರೆ ಹೊಸ ವಿಧಾನವು ಇಂಗಾಲ ಬಿಡುಗಡೆಗೊಳಿಸದೆ 9 ಲೀಟರ್ ನೀರಿನಿಂದ ಸುಮಾರು 50 ಯೂನಿಟ್ ವಿದ್ಯುತ್ ಬಳಸಿಕೊಂಡು ಒಂದು ಕೆಜಿ ಹೈಡ್ರೋಜನ್ ತಯಾರಿಸುತ್ತದೆ. 25 ಕಿಲೋ ವ್ಯಾಟ್ ಉಪಕರಣದಿಂದ ದಿನಕ್ಕೆ 10.7 ಕೆಜಿ ಹೈಡ್ರೋಜನ್ ತಯಾರಿಸಲು ಸಾಧ್ಯವಿದೆ.
ಹೈಡ್ರೋಜನ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕಿ ರಮ್ಯಶ್ರೀ, ಪ್ರಿಯಾಂಕ ಸಹಸ್ರಬುದ್ದೆ, ಸೀನಿಯರ್ ಸ್ಟಾಕ್ ಇಂಜಿನಿಯರ್ ಕಿರಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.












