ಉಡುಪಿ: ಕಾಪು ತಾಲೂಕು ಇನ್ನಂಜೆ ಗ್ರಾಮದ ಶಂಕರಪುರದಲ್ಲಿರುವ ವಿಶ್ವಾಸದ ಮನೆ ಎಂಬ ಅನಾಥ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಸುಮಾರು 20 ರಿಂದ 25 ವರ್ಷ ಪ್ರಾಯದ ಬುದ್ಧಿಮಾಂದ್ಯ ಯುವಕನು ಮಾರ್ಚ್ 30 ರಂದು ರಾತ್ರಿ 10.30 ರ ನಂತರ ಆಶ್ರಮದಿಂದ ನಾಪತ್ತೆಯಾಗಿರುತ್ತಾರೆ.
5 ಅಡಿ 8 ಇಂಚು ಎತ್ತರ, ಕೋಲುಮುಖ, ಗೋದಿ ಮೈಬಣ್ಣ, ಕುತ್ತಿಗೆಯ ಬಲಭಾಗದಲ್ಲಿ ಕಪ್ಪು ಮಚ್ಚೆ ಹೊಂದಿರುವ ಈತನಿಗೆ ಮಾತನಾಡಲು ಬರುವುದಿಲ್ಲ.
ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ಪೊಲೀಸ್ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444, 2526709, ಕಾರ್ಕಳ ಪೊಲೀಸ್ ಉಪಾಧೀಕ್ಷಕರ ಕಚೇರಿ ದೂ.ಸಂಖ್ಯೆ: 08258-231333, ಕಾಪು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 0820-2572333, ಮೊ.ನಂ: 9480805431 ಹಾಗೂ ಕಾಪು ಪೊಲೀಸ್ ಉಪ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 0820-2551300, ಮೊ.ನಂ: 9480805449 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಪು ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

















