ಉಡುಪಿ: ವೈಯಕ್ತಿಕ ವೈದ್ಯಕೀಯ ವಿಮೆ ಹಾಗೂ ಜೀವ ವಿಮೆಯನ್ನು ಸೊನ್ನೆ ಮಾಡಿ ಶೇ. 99ರಷ್ಟು ದಿನ ಬಳಕೆಯ ವಸ್ತುಗಳನ್ನು ಶೇ. 5ರ ವ್ಯಾಪ್ತಿಗೆ ತಂದು ಶೇ. 98ರ ವ್ಯಾಪ್ತಿಯಲ್ಲಿ ಇದ್ದ ಐಷಾರಾಮಿ ವಸ್ತುಗಳನ್ನು ಕೂಡ ಶೇ. 18ರ ಮಿತಿಗೆ ತಂದಿರುವ ಕ್ರಮವನ್ನು ವಾಣಿಜ್ಯ ಮತ್ತು ಕೈಗಾರಿಕೆಗಳು ಮುಕ್ತ ಕಂಠದಿಂದ ಸ್ವಾಗತಿಸುತ್ತೇವೆ. ಇದರಿಂದ ಉತ್ಪಾದನಾ ರಂಗಕ್ಕೆ ಹೊಸ ಪ್ರೋತ್ಸಾಹ ಬರುತ್ತಿದ್ದು, ದೇಶಿಯ ವಸ್ತುಗಳು ಜನ ಸಾಮಾನ್ಯರಿಗೆ ಕೈಗೆಟಕುವ ದರಗಳಲ್ಲಿ ದೊರಕಲಿದೆ.
ಉತ್ಪಾದಕರು ಸರಕಾರ ನೀಡಿದ ರಿಯಾಯಿತಿಯನ್ನು ಜನ ಸಾಮಾನ್ಯರಿಗೆ ವರ್ಗಾಯಿಸಬೇಕೆಂದು ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕೆಯ ಮಹಾಸಂಸ್ಥೆಯ ನಿರ್ದೇಶಕ ಅಂಡಾರು ದೇವಿಪ್ರಸಾದ್ ಶೆಟ್ಟಿ ಒತ್ತಾಯಿಸಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017 ರಲ್ಲಿ ಒಂದು ದೇಶ ಒಂದು ತೆರಿಗೆ ಜಿಎಸ್ ಟಿ ಮೂಲಕ ನೇರ ತೆರಿಗೆ ವಿಧಾನವನ್ನು 4 ಸ್ತರಗಳಲ್ಲಿ ಅಳವಡಿಸಿ ಗ್ರಾಹಕರಿಗೆ ಮತ್ತು ವ್ಯಾಪಾರಸ್ಥರಿಗೆ ಅತ್ಯಂತ ಸುಲಭ ರೀತಿಯಲ್ಲಿ ತೆರಿಗೆ ಪಾವತಿಸಲು ಹಾಗು ಹೆಚ್ಚಿನ ನೋಂದಾಯಿತ ತೆರಿಗೆದಾರರನ್ನು ಆಕರ್ಷಿತಗೊಳಿಸಲಾಯಿತು.
ತದನಂತರ ಪ್ರತಿ ತಿಂಗಳ ತೆರಿಗೆ ಒಳ ಹರಿವು ಗಣಿನೀಯವಾಗಿ ಹೆಚ್ಚುತ್ತಾ ಸರಿ ಸುಮಾರು ತಿಂಗಳಿಗೆ 2 ಲಕ್ಷ ಕೋಟಿ ಸಂಗ್ರಹ ಆದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಹೇಳಿದ ಮಾತಿನಂತೆ ಜಿಎಸ್ ಟಿ ಸುಧಾರಣೆ ಮಾಡುವ ಮೂಲಕ ದೇಶದ ಅತಿ ದೊಡ್ಡ ಆರ್ಥಿಕ ಸುಧಾರಣೆ, ಕೈಗೆಟುವ ದರದಲ್ಲಿ ಪಾಪದ ವಸ್ತುಗಳನ್ನೂ ಮತ್ತು ಐಷಾರಾಮಿ ಕಾರು ಹೊರತುಪಡಿಸಿ ಶೇ. 5 ಮತ್ತು ಶೇ. 18 ರ 2 ಸ್ತರಗಳಲ್ಲಿ ಹೊಸ ಕ್ರಾಂತಿಯನ್ನು ದೇಶದ ತೆರಿಗೆ ವ್ಯವಸ್ಥೆಯಲ್ಲಿ ಬಡ ಮತ್ತು ಮಾಧ್ಯಮ ವರ್ಗಕ್ಕೆ ನೀಡಲಾಯಿತು. ವ್ಯಾಪಾರಿಗಳು ಉದ್ಧಿಮೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಜಿಎಸ್ ಟಿ ಕಾನೂನಿನ ಅಡಿಯಲ್ಲಿ ನೋಂದಾಯಿಸಿ ಸರಕಾರ ಕೊಟ್ಟ ರಿಯಾಯಿತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಡಿಸ್ಟ್ರಿಕ್ಟ್ ಟ್ಯಾಕ್ಸ್ ಅಸೋಸಿಯೇಷನ್ ಇದರ ರಾಜ್ಯ ಪ್ರತಿನಿಧಿ ದಿವಾಕರ್ ಶೆಟ್ಟಿ, ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ವಾಲ್ಟೇರ್ ಸಲ್ದಾನ ಇದ್ದರು.












