ಯೆಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರಿಗೆ ಯಾವುದೇ ಭಯ ಬೇಡ: ನಿರ್ಮಲಾ ಸೀತಾರಾಮನ್

ನವದೆಹಲಿ: ಯೆಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರಿಗೆ ಯಾವುದೇ ಭಯ ಬೇಡ, ನಿಮ್ಮ ಹಣ ಸುರಕ್ಷಿತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯೆಸ್ ಬ್ಯಾಂಕ್ ಠೇವಣಿದಾರರಲ್ಲಿ ಧೈರ್ಯ ತುಂಬಿದ್ದಾರೆ.

ಸುದ್ದಿಗೋಷ್ಠಿ ಮಾತನಾಡಿದ ಅವರು, ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಲಾಗುವುದು. ಆರ್‌ಬಿಐ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಎಸ್‍.ಬಿ.ಐ 5,೦೦೦ ಕೋಟಿ ರೂ. ಯೆಸ್ ಬ್ಯಾಂಕ್‍ ನಲ್ಲಿ ಹೂಡಿಕೆ ಮಾಡಲಿದ್ದು, ಅಲ್ಲಿ ಇರುವ ಬ್ಯಾಂಕ್ ಉದ್ಯೋಗಿಗಳು ಒಂದು ವರ್ಷ ಯಾವುದೇ ಭಯ ಪಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಬಿಕ್ಕಟ್ಟು ಯೆಸ್ ಬ್ಯಾಂಕ್ ಗೆ ದಿಢೀರ್ ಸಂಭವಿಸಿದ್ದಲ್ಲ. 2017ರಿಂದಲೇ ಆರ್.ಬಿ.ಐ ಯೆಸ್ ಬ್ಯಾಂಕ್ ಮೇಲೆ ನಿಗಾ ಇಟ್ಟಿದ್ದು, ಈ ನಿಟ್ಟಿನಲ್ಲಿ ಆರ್‌.ಬಿ.ಐ ಯೆಸ್ ಬ್ಯಾಂಕ್‍ ನ ವ್ಯವಸ್ಥಾಪ ನಿರ್ದೇಶಕ ಹಾಗೂ ಸಿಇಒ ಅವರನ್ನು ಬದಲಿಸಲು ಶಿಫಾರಸು ಮಾಡಿದೆ. ಹಾಗೇಯೆ 2018ರ ಸೆಪ್ಟೆಂಬರ್ ನಲ್ಲಿ ಹೊಸ ಸಿಇಒ ಅನ್ನು ನೇಮಕ ಮಾಡಲಾಯಿತು. ಅವತ್ತಿನಿಂದ ಬ್ಯಾಂಕಿನ ಬಿಕ್ಕಟ್ಟು ಸುಧಾರಣಗೆ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ಆರ್‌.ಬಿ.ಐ ಗವರ್ನರ್ ಶಕ್ತಿಕಾಂತ್ ದಾಸ್ ಮಾತನಾಡಿ, ಆರ್ಥಿಕತೆಯನ್ನು ಹಾತೋಟಿಗೆ ತರುವ ದೃಷ್ಟಿಯಿಂದಲೇ ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ. 30 ದಿನದ ಒಳಗೆ ಯೆಸ್ ಬ್ಯಾಂಕ್ ನ್ನು ಪುನಶ್ಚೇತನಗೊಳಿಸಲಿದ್ದೇವೆ. ಗ್ರಾಹಕರು ಆತಂಕ ಪಡುವುದು ಬೇಡ ಎಂದಿದ್ದಾರೆ.