ಬೆಂಗಳೂರು:ರಾಜ್ಯದ ಎಲ್ಲಾ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಈಗಾಗಲೇ ಪಾಠ ಪ್ರವಚನಗಳು ನಡೆಯುತ್ತಿದ್ದು ಪರೀಕ್ಷೆಯನ್ನು ಕೂಡ ಆನ್ ಲೈನ್ ನಲ್ಲಿಯೇ ಮಾಡುವ ಕುರಿತು ಸರಕಾರ ಯೋ ಚಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪದವಿ ಕಾಲೇಜುಗಳಲ್ಲಿ ಎಲ್ಲಾ ಪರೀಕ್ಷೆಗಳು ಹಾಗೂ ಹೊಸ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಅಗಸ್ಟ್ ನಲ್ಲಿ ಪೂರ್ಣಗೊಂಡು, ಅಗಸ್ಟ್ ಹಾಗೂ ಸಷ್ಟೆಂಬರ್ ನಲ್ಲಿ ಎರಡು ಬ್ಯಾಚ್ ಗಳಲ್ಲಿ ಹೊಸ ತರಗತಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಆನ್ ಲೈನ್ ಪರೀಕ್ಷಾ ತಯಾರಿಗೆ ಕ್ರಮ ಕೈಗೊಳ್ಳಲಾಗುವುದು ವಿದ್ಯಾರ್ಥಿಗಳು ಆತಂಕ ಪಡಬೇಕಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.