ಮಂಗಳೂರು: ‘ಕತ್ತಲೆಯಿಂದ ಬೆಳಕಿನಕಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವುದೇ ದೀಪಾವಳಿಯ ವಿಶೇಷ. ಆ ಮೂಲಕ ನಮ್ಮಲ್ಲಿ ಪ್ರೀತಿ, ವಿಶ್ವಾಸ ಸೌಹಾರ್ದ ಬೆಳೆಯಬೇಕು. ದೀಪಾವಳಿಯು ಎಲ್ಲರ ಜೀವನದಲ್ಲಿ ಬೆಳಕನ್ನು ತರಲಿ ಎಂದು ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯಿ ಹೇಳಿದರು.
ಅವರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು ಮಂಗಳೂರು ಇವರ ಆಶ್ರಯದಲ್ಲಿಎಕ್ಸ್ಪೋಡಿಯಂ ಸಭಾಂಗಣದಲ್ಲಿ ನಡೆದ ದೀಪಾವಳಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೀಪಾವಳಿಯ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಆಧ್ಯಾತ್ಮಿಕ ದೃಷ್ಟಿಕೋನದ ಹಿನ್ನೆಲೆಯಲ್ಲಿ ಲೌಕಿಕ ಮತ್ತು ಅಲೌಕಿಕ ಭಾವವನ್ನು ತಿಳಿಯಬೇಕು.ಆತ್ಮಪ್ರಜ್ಞೆಯ ಬೆಳಕಿನ ಮೂಲಕ ನಮ್ಮಲ್ಲಿರುವ ದೈವಿಕ ಜ್ಞಾನವನ್ನು ಬೆಳಗಿಸಿಕೊಳ್ಳಬೇಕು. ಅಂತೆಯೇ ತಮ್ಮ ಕರ್ತವ್ಯ ನಿಷ್ಠೆಯಲ್ಲಿ ಧನಾತ್ಮಕವಾದ ಅಂಶಗಳನ್ನು ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ನಾವು ಬೇರೆಯವರ ಜೀವನದಲ್ಲಿ ಸಂತೋಷ ಹಾಗೂ ಬೆಳಕು ತರುವಂತವರಾಗಬೇಕು. ಬೆಳಕು ಜ್ಞಾನದ ಸಂಕೇತವಾಗಿದ್ದು ಕಠಿಣ ಪರಿಶ್ರಮದ ಮೂಲಕ ಸಾಧನೆಯ ಪಥವನ್ನು ಮುಟ್ಟಬೇಕು. ಗುರಿಯನ್ನುತಲುಪುವಲ್ಲಿ ನಿರಂತರವಾದ ಪರಿಶ್ರಮ ಅಗತ್ಯ. ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯನ್ನು ಬೆಳೆಸುವಲ್ಲಿ ನರೇಂದ್ರ ಎಲ್ ನಾಯಕ್ ಅವರ ಅವಿರತ ಶ್ರಮ ಮತ್ತು ಅದಮ್ಯ ಶಕ್ತಿಯನ್ನುಅವರು ಶ್ಲಾಘಿಸಿದರು. ದೀಪಾವಳಿ ಹಬ್ಬವು ಎಲ್ಲರಿಗೂ ಒಳಿತನ್ನುಂಟು ಮಾಡಲಿ ಎಂದು ಶುಭ ಹಾರೈಸಿದರು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ಡಾ.ಉಷಾಪ್ರಭಾ.ಎನ್. ನಾಯಕ್ ಮಾತನಾಡಿ, ದೇಶದಲ್ಲಿ ಹಲವು ಹಬ್ಬಗಳನ್ನು ಆಚರಿಸುತ್ತೇವೆ. ಅದರಲ್ಲಿ ವಿಶೇಷವಾಗಿ ದೀಪಾವಳಿ ಹಬ್ಬವು ಸೌಂದರ್ಯ, ಸಂತೋಷದ ಹಬ್ಬವಾಗಿದ್ದು, ಜ್ಞಾನದ ಬೆಳಕನ್ನು ಅದು ಸಂಕೇತಿಸುತ್ತದೆ ಎಂದರು
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮಉತ್ಕೃಷ್ಟತೆಯ ಪಯಣದಲ್ಲಿ ಮತ್ತಷ್ಟು ಮೈಲಿಗಲ್ಲುಗಳನ್ನು ಸಾಧಿಸಲು ದೀಪಾವಳಿ ಹಬ್ಬದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್ ನಾಯಕ್, ವಾಸ್ತುಶಿಲ್ಪ ತಜ್ಞೆ ಶ್ರೀಮತಿ ದೀಪಿಕಾ ಎ ನಾಯಕ್, ಎಕ್ಸ್ಪರ್ಟ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.
ರಿದ್ದಿಅಡಪ, ಪ್ರಶೀತ್ ಶೆಟ್ಟಿ, ಸಂಯುಕ್ತ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಶ್ರೀವಿದ್ಯಾ ವಂದಿಸಿದರು.
ದೀಪಾವಳಿ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಗೂಡುದೀಪ ಸ್ವರ್ಧೆ ಮತ್ತು ಜನಪದ ನೃತ್ಯ ಸ್ವರ್ಧೆಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.