Home Trending ರಾಜ್ಯ ದಲ್ಲಿಂದು ಕಡಿಮೆಯಾಯ್ತು ಕೋವಿಡ್ ಪ್ರಕರಣ: ಗುಣಮುಖರಾದವರು ಜಾಸ್ತಿ

ರಾಜ್ಯ ದಲ್ಲಿಂದು ಕಡಿಮೆಯಾಯ್ತು ಕೋವಿಡ್ ಪ್ರಕರಣ: ಗುಣಮುಖರಾದವರು ಜಾಸ್ತಿ

ಬೆಂಗಳೂರು: ಇಂದು ಹೊಸ ಕೋವಿಡ್-19 ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಇಂದು 36 ಸಾವಿರದ 475 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 1581457ಕ್ಕೆ ಏರಿಕೆಯಾಗಿದೆ.

31 ಸಾವಿರದ 531 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 2203462 ಆಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 600147 ಕ್ಕೆ  ಏರಿಕೆಯಾಗಿದೆ.

 403 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸೋಂಕಿನಿಂದ ಒಟ್ಟಾರೇ, ಮೃತಪಟ್ಟವರ ಸಂಖ್ಯೆ 21, 837ಕ್ಕೆ ಏರಿಕೆಯಾಗಿದೆ. ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ. 27.84 ರಷ್ಟಿದ್ದು, ಮರಣ ಪ್ರಮಾಣ ಶೇ. 1.27 ರಷ್ಟಿದೆ. ಬೆಂಗಳೂರು ನಗರದಲ್ಲಿ 8344 ಪ್ರಕರಣಗಳು ವರದಿಯಾಗಿದ್ದು, 143 ಮಂದಿ ಸಾವನ್ನಪ್ಪಿದ್ದಾರೆ.ಸುಮಾರು  13612 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
error: Content is protected !!