ಬೆಂಗಳೂರು: ಕೊರೊನಾ ಸಂಕಷ್ಟದಲ್ಲಿರುವ ವಿವಿಧ ವರ್ಗಗಳ ಜನರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಎರಡನೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಲಾಕ್ಡೌನ್ನಿಂದಾಗಿ ಅನೇಕ ಕ್ಷೇತ್ರಗಳಲ್ಲಿನ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸಿಎಂ ಅವರು ಇಂದು ಎರಡನೇ ಬಾರಿಗೆ 500 ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಸ್ ಅನ್ನ ಘೋಷಣೆ ಮಾಡಿದರು.
ಪ್ಯಾಕೇಜ್ ವಿವರ ಹೀಗಿದೆ:
ಪವರ್ ಲೂಮ್ ನೇಕಾರರಿಗೆ ತಲಾ 3 ಸಾವಿರ ಪರಿಹಾರ, 59 ಸಾವಿರದ ನೇಕಾರರಿಗೆ ಇದರ ಲಾಭ ಸಿಗಲಿದೆ. ಇದಕ್ಕಾಗಿ ಒಟ್ಟು 35 ಕೋಟಿ ರೂಪಾಯಿ ಮೀಸಲಿಡಲಾಗಿದೆ
ಚಲನಚಿತ್ರ ಮತ್ತು ದೂರದರ್ಶನ ಮಾಧ್ಯಮದಲ್ಲಿನ ಅಸಂಘಟಿತ ಕಾರ್ಮಿಕರಿಗೆ ತಲಾ ₹ 3 ಸಾವಿರ ಪರಿಹಾರ
ಆಶಾ ಕಾರ್ಯಕರ್ತರಿಗೆ 3 ಸಾವಿರ ರೂ. ಪರಿಹಾರ
ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ ಪರಿಹಾರ
ಮೀನುಗಾರರಿಗೆ ತಲಾ 3 ಸಾವಿರ ಪರಿಹಾರ ಘೋಷಣೆ
ಆಶಾ ಕಾರ್ಯಕರ್ತೆಯರಿಗೆ ₹ 3 ಸಾವಿರ ಪರಿಹಾರ
ಮುಜರಾಯಿ ದೇಗುಲದ ಅರ್ಚಕರು, ನೌಕರರಿಗೆ ₹ 3 ಸಾವಿರ
ನ್ಯಾಯವಾದಿಗಳ ಸಂಘಕ್ಕೆ ₹5 ಕೋಟಿ ಪರಿಹಾರ
ಮಗ್ಗಗಳ ಕಾರ್ಮಿಕರಿಗೆ ತಲಾ 3 ಸಾವಿರದಂತೆ ಪರಿಹಾರ
ಸಣ್ಣ ಕೈಗಾರಿಕೆಗಳ ವಿದ್ಯುತ್ ಶುಲ್ಕ ಪಾವತಿಯಿಂದ ವಿನಾಯಿತಿ
ಅನುದಾನ ರಹಿತ ಶಿಕ್ಷಕರಿಗೆ ತಲಾ ₹5 ಸಾವಿರ
ರೂ.ಗಳನ್ನು ಸರ್ಕಾರ ಘೋಷಣೆ ಮಾಡಿದೆ.