ಬೆಂಗಳೂರು: ಕೋವಿಡ್-2ನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹೇರಿರುವ ಲಾಕ್ ಡೌನ್ ಮೇ 24ಕ್ಕೆ ಮುಗಿಯಲಿದ್ದು, ಅದನ್ನು ವಿಸ್ತರಿಸುವ ಕುರಿತು ಮೇ 23ಕ್ಕೆ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಲಾಕ್ ಡೌನ್ ನಿಂದ ಯಾವ ಮಟ್ಟಿಗೆ ಬೆಂಗಳೂರು ನಗರ ಸೇರಿದಂತೆ ಜಿಲ್ಲೆಗಳಲ್ಲಿ ಪರಿಣಾಮ ಬೀರಿದೆ, ಮುಂದೆ ಏನು ಅಗತ್ಯ ಕ್ರಮಗಳನ್ನು ತೆಗೆದುಕೊಂಡರೆ ಉತ್ತಮ ಎಂದು ಸಚಿವರು, ಅಧಿಕಾರಿಗಳೊಂದಿಗೆ 23ರಂದು ಸಭೆ ನಡೆಸಿ ತೀರ್ಮಾನಕ್ಕೆ ಬರುತ್ತೇನೆ ಎಂದು ಹೇಳಿದರು.















