ಉಡುಪಿ: ತುಳುಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಮಹಾಸಮ್ಮೇಳನ ಡಿ.13ರಿಂದ 15ರವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಪರ್ಯಾಯ ಶ್ರೀ ವಿದ್ಯಾಾಧೀಶತೀರ್ಥ ಶ್ರೀಪಾದರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಡಿ.13ರಂದು ಸಂಜೆ 6.45ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದೆ. ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಆರ್ಶೀವಚನ ನೀಡಲಿದ್ದಾರೆ. ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಲಿದ್ದಾಾರೆ. ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಎಸಿಯಿ ಮೆನ್ಯ್ಯುಕ್ಚರಿಂಗ್ ಸಿಸ್ಟಮ್‌ಸ್‌ನ ರಾಮದಾಸ್ ಮಡಮಣ್ಣಾಯ ಭಾಗವಹಿಸಲಿದ್ದಾಾರೆ ಎಂದು ಹೇಳಿದರು
ಸಂಸ್ಕೃತ ಮಹಾಪಾಠ ಶಾಲೆಯಿಂದ ಮೆರವಣಿಗೆ:
ಡಿ.14ರಂದು ಬೆಳಗ್ಗೆ 8ರಿಂದ 9ರ ವರೆಗೆ ತುಳು ಶಿವಳ್ಳಿ ಮಹಿಳೆಯರಿಂದ ಲಕ್ಷ್ಮೀ ಶೋಭಾನೆ ನಡೆಯಲಿದೆ. 9ರಿಂದ ಉಡುಪಿ ಸಂಸ್ಕೃತ ಮಹಾಪಾಠ ಶಾಲೆಯಿಂದ ರಾಜಾಂಗಣದವರೆಗೆ ಮೆರವಣಿಗೆ ಜರಗಲಿದೆ. 10ರಿಂದ ವಿಶ್ವಸಮ್ಮೇಳನದ ಉದ್ಘಾಟನೆ ನೆರವೇರಲಿದೆ. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಪರ್ಯಾಯ ಶ್ರೀ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟನೆ ನೆರವೇರಿಸಲಿದ್ದಾಾರೆ. ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಆರ್ಶೀರ್ವಚನ ನೀಡಲಿದ್ದಾರೆ ಎಂದವರು ತಿಳಿಸಿದರು.
ಧಾರ್ಮಿಕ ಸಮಾವೇಶ:
11.30ರಿಂದ 1ರ ವರೆಗೆ ಧಾರ್ಮಿಕ ಸಮಾವೇಶ ನಡೆಯಲಿದ್ದು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆರ್ಶೀವರ್ಚನ ನೀಡಲಿದ್ದಾರೆ. ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಹರಿಕೃಷ್ಣ ಪುನರೂರು, ಕುಂಭಾಶಿಯ ವಿದ್ವಾನ್ ಶ್ರೀಪತಿ ಉಪಾಧ್ಯಾಯ, ಗುಂಡಿಬೈಲಿನ ವಿದ್ವಾನ್ ಸುಬ್ರಹ್ಮಣ್ಯ ಭಟ್, ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಸತ್ಯನಾರಾಯಣ ಆಚಾರ್, ದೇರೆಬೈಲ್‌ನ ಶಿವಪ್ರಸಾದ ತಂತ್ರಿ, ಉಡುಪಿಯ ರಾಮದಾಸ್ ಭಟ್ ಭಾಗವಹಿಸಲಿದ್ದಾರೆ.
ಉದ್ಯಮಶೀಲತಾ ಸಮಾವೇಶ
2ರಿಂದ 3.15ರ ವರೆಗೆ ಉದ್ಯಮಶೀಲತಾ ಸಮಾವೇಶ ನಡೆಯಲಿದೆ. ಕಾಣಿಯೂರು ಮಠಾಧೀಶ ಶ್ರೀ ವಿದ್ಯಾಾವಲ್ಲಭ ತೀರ್ಥ ಸ್ವಾಮೀಜಿ ಆರ್ಶೀರ್ವಚನ ನೀಡಲಿದ್ದಾರೆ. ಪರ್ಕಳದ ಮಂಜುನಾಥ ಉಪಾಧ್ಯಾಯ ಅಧ್ಯಕ್ಷತೆ ವಹಿಸಲಿದ್ದಾಾರೆ. ಬೆಂಗಳೂರಿನ ರಾಮದಾಸ್ ಮಡಮಣ್ಣಾಯ, ಹೈದರಾಬಾದ್‌ನ ರಾಘವೇಂದ್ರ ರಾವ್, ದುಬೈಯ ಸುಧಾಕರ ಪೇಜಾವರ, ಹುಬ್ಬಳ್ಳಿಿಯ ಶ್ರೀಕಾಂತ ಕೆಮ್ತೂರು, ಬೆಂಗಳೂರಿನ ರಾಮಚಂದ್ರ ಉಪಾಧ್ಯಾ ಬಾಳೆಕುದ್ರು ಭಾಗವಹಿಸಲಿದ್ದಾಾರೆ. ಸಂಜೆ 3.15ರಿಂದ 3.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 3.30ರಿಂದ 4.45ರ ವರೆಗೆ ನಡೆಯುವ ಶೈಕ್ಷಣಿಕ ಸಮಾವೇಶದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಆರ್ಶೀರ್ವಚನ ನೀಡಲಿದ್ದಾರೆ ಎಂದರು.
ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿ.ವಿ.ಕುಲಪತಿ ಡಾ ಪಿ.ಎಸ್.ಯಡಪಡಿತ್ತಾಾಯ, ಶ್ರೀನಿವಾಸ ವಿ.ವಿ.ಕುಲಪತಿ ರಾಘವೇಂದ್ರ ರಾವ್, ನಿಟ್ಟೆೆ ವಿವಿಯ ಉಪಕುಲಪತಿ ಡಾ ಎಂ.ಎಸ್.ಮುಡಿತ್ತಾಯ, ಡಿಡಿಪಿಐ ಶೇಷ ಶಯನ ಕಾರಿಂಜ ಭಾಗವಹಿಸಲಿದ್ದಾರೆ.
ಸಂಜೆ 4.45 ರಿಂದ 5ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. 5ರಿಂದ 6.30ರ ವರೆಗೆ ‘ತುಳು ಶಿವಳ್ಳಿಿ ಸಮಾಜ ಅಂದು-ಇಂದು-ಮುಂದು’ ಕಾರ್ಯಕ್ರಮ ಜರಗಲಿದೆ. ಪ್ರದೀಪ್ ಕುಮಾರ್ ಕಲ್ಕೂರ ಅಧ್ಯ ಕ್ಷತೆ ವಹಿಸಲಿದ್ದಾಾರೆ. ಪ್ರೊ ಶ್ರೀಪತಿ ತಂತ್ರಿ, ಕುಂಟಾರ್ ರವೀಶ್ ತಂತ್ರಿ, ಬಾಲಾಜಿ ರಾಘವೇಂದ್ರ ಆಚಾರ್, ಡಾ ದಯಾಕರ್ ಎಂ.ಎಂ., ಹರೀಶ್ ಪುತ್ತೂರಾಯ, ವಕೀಲ ಪ್ರದೀಪ್ ಕುಮಾರ್ ಭಾಗವಹಿಸಲಿದ್ದಾರೆ. 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದರು.
10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ:
ಸಂಘಟನ ಅಧ್ಯ ಕ್ಷ ಡಾ ಪಿ.ಕೆ.ಬಾಲಕೃಷ್ಣ ಮೂಡಂಬಡಿತ್ತಾಾಯ ಮಾತನಾಡಿ ಬೆಂಗಲೂರು, ಮೈಸೂರು, ಮುಂಬಯಿಯ ಬ್ರಾಹ್ಮಣರು ಭಾಗವಹಿಸುವ ನಿರೀಕ್ಷೆೆ ಇದೆ. ಸುಮಾರು 10 ಸಾವಿರದಷ್ಟು ಮಂದಿ ಭಾಗವಹಿಸಲಿದ್ದಾರೆ.
ಕಾರ್ಯಾಧ್ಯ ಕ್ಷ ಮಂಜುನಾಥ ಉಪಾಧ್ಯಾಯ, ಪ್ರಧಾನ ಸಂಚಾಲಕ ಪುರಾಣಿಕ ಎಂ.ಬಿ., ಕಾರ್ಯದರ್ಶಿಗಳಾದ ಶ್ರೀಶ ಭಟ್ ಕಡೆಕಾರ್, ಜಯರಾಮ ಭಟ್ ಬೈಲೂರು, ಜನಾರ್ದನ ಕೊಡವೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸಮ್ಮೇಳನಕ್ಕೆ ನೆರವಾಗಿ:
ಸಮ್ಮೇಳನವನ್ನು ಅಚ್ಚುಕಟ್ಟಾಗಿ ನೆರವೇರಿಸಲು ದಾನಿಗಳ ನೆರವೂ ಬೇಕು ದಾನಿಗಳು ದೇಣಿಗೆ ನೀಡಿ ಸಹಕರಿಸಬೇಕಿದೆ.
ಬ್ಯಾಂಕ್ ವಿವರ;
Karnataka BankLtd, Branch:Udupi-car Street,
Account no:8022500102297001
IFS CODE:KARB 0000802












