ನವದೆಹಲಿ: ಕೇಂದ್ರ ಸರ್ಕಾರವು ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವ ಮೂಲಕ ಸಾಲಗಾರರಿಗೆ ಬಂಪರ್ ಕೊಡುಗೆ ನೀಡಿದೆ.
ಸರ್ಕಾರ ₹ 2 ಕೋಟಿಯವರೆಗಿನ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ ಮಾಡಿದೆ. ಇದು ಎಂಎಸ್ಎಂಇ, ಗೃಹ, ವೈಯಕ್ತಿಕ, ವಾಹನ ಸಾಲ ಪಡೆದವರಿಗೆ ಅನ್ವಯವಾಗಲಿದೆ.
ಇದರಿಂದ ಸರ್ಕಾರಕ್ಕೆ ₹ 6,500 ಕೋಟಿ ಹೆಚ್ಚಿನ ಹೊರೆಯಾಗಲಿದೆ. ಮಾರ್ಚ್ 1 ರಿಂದ ಆಗಸ್ಟ್ 31ರವರೆಗಿನ ಸಾಲದ ಕಂತು ಮರುಪಾವತಿ ಮುಂದೂಡಿಕೆ ಅವಧಿಗೆ ಅನ್ವಯಿಸುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯೋಜನೆಯ ಪ್ರಯೋಜನ ಪಡೆದವರು ಹಾಗೂ ಪಡೆಯದೇ ಇರುವವರಿಗೂ ಇದರ ಲಾಭ ದೊರೆಯಲಿದೆ.












