ಶಾಂತಿನಗರದಲ್ಲಿ ಆತಂಕ ಸೃಷ್ಟಿಸಿದ್ದ ಹಸು ಮೃತ್ಯು: ಅಂತ್ಯಸಂಸ್ಕಾರ ನೇರವೇರಿಸಿದ ನಿತ್ಯಾನಂದ ಒಳಕಾಡು

80ಬಡಗುಬೆಟ್ಟು ಗ್ರಾಮದ ಶಾಂತಿನಗರದಲ್ಲಿ ಮಾನಸಿಕ ಕಾಯಿಲೆಗೆ ತುತ್ತಾಗಿ ಬಹಳಷ್ಟು ಜನರಿಗೆ ಗಾಯಗೊಳಿಸಿದ್ದ ಹಸುವೊಂದನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಸ್ಥಳೀಯ ಸಹಕಾರದೊಂದಿಗೆ ಸೆರೆ ಹಿಡಿದಿದ್ದರು. ಇದೀಗ ಆ ಹಸು ಕಾಯಿಲೆ ಉಲ್ಬಣಗೊಂಡು ಮೃತಪಟ್ಟಿದ್ದು, ಅದರ ಅಂತ್ಯಸಂಸ್ಕಾರವನ್ನು ಸಾರ್ವಜನಿಕರ ಸಹಕಾರದೊಂದಿಗೆ ಮಾಡಲಾಯಿತು. ಗ್ರಾಪಂ ಮಾಜಿ ಸದಸ್ಯ ರಘು, ರೇಣು ಶೆಟ್ಟಿಗಾರ್, ಪ್ಲವರ್ ವಿಷ್ಣು & ಗಣೇಶೋತ್ಸವ ಸಮಿತಿ ಅಧ್ಯಕ್ಷರು ಸಹಕರಿಸಿದರು.