ಮಂಗಳೂರು: ಮಂಗಳೂರಿನಲ್ಲಿ ಕೊರೋನ ಮಹಾಮಾರಿಗೆ ಇಂದು (ಜು.1)ಇಬ್ಬರು ಬಲಿಯಾಗಿದ್ದಾರೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಟ್ಕಳ ಮೂಲದ 31 ವರ್ಷದ ಯುವಕ ಹಾಗೂ 78 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.
ಮೃತ ಯುವಕ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಮೃತಪಟ್ಟ ಬಳಿಕ ಕೊರೋನಾ ಟೆಸ್ಟ್ ನಲ್ಲಿ ಸೋಂಕು ದೃಢಪಟ್ಟಿದೆ.
ಕೊರೋನಾ ಪಾಸಿಟಿವ್ ಆಗಿದ್ದ
ಮಂಗಳೂರಿನ ಬೆಂಗ್ರೆ ನಿವಾಸಿ 78 ವರ್ಷದ ವ್ಯಕ್ತಿ ಡಯಾಬಿಟಿಸ್ ಮತ್ತು ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಸಾವಿನ ಸಂಖ್ಯೆ 16ಕ್ಕೇರಿದೆ.