ಪುತ್ತೂರು: ಬೈಕ್ ಹಾಗೂ ಬೊಲೆರೋ ಜೀಪ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ತೆಂಕಿಲ ಪರ್ಲಡ್ಕ ಬೈಪಾಸ್ ರಸ್ತೆಯ ಶಿವನಗರ ಎಂಬಲ್ಲಿ ನಡೆದಿದೆ.
ಮೃತನನ್ನು ಪರ್ಲಡ್ಕದ ಹಾಸೀಮ್ ಎಂದು ತಿಳಿದುಬಂದಿದೆ. ಮೆಡಿಕಲ್ ಶಾಪ್‍ಗೆ ಹೋಗುತ್ತಿದ್ದ ವೇಳೆ ಹಾಸೀಮ್ ಅವರ ಬೈಕ್ ಬೊಲೆರೋ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಹಾಸೀಮ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.












