ಉಡುಪಿ: ಕೊರೊನಾ ಸಂಕಷ್ಟದಿಂದಾಗಿ ಜಿಲ್ಲೆಯಲ್ಲಿ ಅತಂತ್ರರಾಗಿರುವ ಒಬ್ಬಂಟಿ ರೋಗಿಗಳು ಹಾಗೂ ಅನಾರೋಗ್ಯ ಪೀಡಿತರ ರಕ್ಷಣೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಕರಾವಳಿ ಯೂತ್ ಕ್ಲಬ್ ಉಡುಪಿ ವತಿಯಿಂದ ಆಗಸ್ಟ್ 13ರಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಈ ಮನವಿಗೆ ಜಿಲ್ಲಾಧಿಕಾರಿಯವರ ಆದೇಶದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕಚೇರಿಗೆ ಪತ್ರ ಬರೆದಿದ್ದು, ಅನಾರೋಗ್ಯ ಪೀಡಿತರಿಗೆ ಅಗತ್ಯ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.
ಸಂಕಷ್ಟದಲ್ಲಿರುವ ಅನಾರೋಗ್ಯ ಪೀಡಿತರು ಸಹಾಯಕ್ಕಾಗಿ ಆರೋಗ್ಯ ಇಲಾಖೆಯ ಕಾಲ್ ಸೆಂಟರ್ ಮೊಬೈಲ್ ಸಂಖ್ಯೆ 9663957222 ಹಾಗೂ 9663950222 ಕರೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ಮನವಿಗೆ ಶೀಘ್ರದಲ್ಲಿ ಸ್ಪಂದಿಸಿ, ಮಾಹಿತಿಯನ್ನು ನೀಡಿದಕ್ಕಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಕರಾವಳಿ ಯೂತ್ ಕ್ಲಬ್ ಧನ್ಯವಾದ ಅರ್ಪಿಸಿದೆ.