ತುಂಬಾ ಮಂದಿಗೆ ತಂಗಳು ಅನ್ನವೆಂದರೆ ತಾತ್ಸಾರ ಭಾವನೆ. ಕೆಲವರಿಗೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಭಾವನೆ ಬೆಳೆದುಬಿಟ್ಟಿದೆ. ಹಾಗಾಗಿ ತಂಗಳು ಅನ್ನವನ್ನು ಬಿಸಾಕುವವರೇ ಜಾಸ್ತಿ. ಆದರೆ ನೆನಪಿರಲಿ ಇಂತಹ ತಂಗಳನ್ನದಲ್ಲೂ ಇದೆ ಆರೋಗ್ಯಕ್ಕೆ ಪೂರಕವಾಗುವ ಅಂಶಗಳು! ಹೌದು. ತಂಗಳನ್ನ ಜೀರ್ಣಕ್ರಿಯೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಅಲ್ಲದೇ ಇದರಿಂದ ಹಲವಾರು ಪ್ರಯೋಜನಗಳಿವೆ. ಹೀಗಾಗಿ ಇನ್ಮುಂದೆ ತಂಗಳು ಅನ್ನವನ್ನು ಎಸೆಯುವ ಮುನ್ನ ಇದರಿಂದ ಆಗುವ ಉಪಯೋಗಗಳೇನು ಎಂಬುದನ್ನು ತಿಳಿದುಕೊಳ್ಳಿ.
- ಉತ್ತಮ ಶಕ್ತಿಗೆ : ಉತ್ತಮ ಶಕ್ತಿಗೆ ತಂಗಳನ್ನ ಪೂರಕಾಗಿದೆ. ತಂಗಳನ್ನ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇವು ದೀರ್ಘಕಾಲದವರೆಗೆ ಶಕ್ತಿಯನ್ನು ಒದಗಿಸುತ್ತವೆ. ಬೆಳಿಗ್ಗೆ ಅಥವಾ ಮಧ್ಯಾಹ್ನ ಇದನ್ನು ತಿನ್ನುವುದರಿಂದ ನಿಮಗೆ ಶಕ್ತಿ ಸಿಗುತ್ತದೆ ಮತ್ತು ಆಯಾಸ ಕಡಿಮೆಯಾಗುತ್ತದೆ
- ರೋಗನಿರೋಧಕ ಶಕ್ತಿಗೆ ಪೂರಕ: ತಂಗಳನ್ನ ಪ್ರಿಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದೆ. ಇವು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತವೆ. ಇದು ದೇಹದಲ್ಲಿ ಸೋಂಕುಗಳು ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
- ಜೀರ್ಣಾಂಗ ವ್ಯವಸ್ಥೆಗೆ ಪೂರಕ: ಜೀರ್ಣಾಂಗ ವ್ಯವಸ್ಥೆಗೆ ಪೂರಕವಾಗಿ ತಂಗಳು ಅನ್ನ ಕೆಲಸ ಮಾಡುತ್ತದೆ. ತಂಗಳು ಅನ್ನದಲ್ಲಿರುವ ನಿರೋಧಕ ಪಿಷ್ಟವು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ನಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
- ತೂಕ ಇಳಿಸಿಕೊಳ್ಳಲು ಇದು ಬೆಸ್ಟ್ : ತೂಕ ಇಳಿಸಿಕೊಳ್ಳಲು ತಂಗಳನ್ನ ಸಹಾಯಕವಾಗಿದೆ ತಂಗಳನ್ನ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಇದರರ್ಥ ಇದು ರಕ್ತಕ್ಕೆ ಸಕ್ಕರೆ ಮಟ್ಟವನ್ನು ನಿಧಾನವಾಗಿ ಬಿಡುಗಡೆ ಮಾಡುತ್ತದೆ. ಇದನ್ನು ತೂಕ ಇಳಿಸಿಕೊಳ್ಳಲು ಪ್ರಯ್ನಿಸುತ್ತಿರುವವರು ತಮ್ಮ ಫುಡ್ ಪ್ಲ್ಯಾನಿಂಗ್ನಲ್ಲಿ ಸೇರಿಸಕೊಳ್ಳಬಹುದಾಗಿದೆ.
- ರಕ್ತದಲ್ಲಿನ ಸಕ್ಕರೆ ಕಂಟ್ರೋಲ್: ತಂಗಳು ಅನ್ನದಲ್ಲಿರುವ ನಿರೋಧಕ ಪಿಷ್ಟವು ನಿಧಾನವಾಗಿ ಜೀರ್ಣವಾಗುತ್ತದೆ. ಇದು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆಯನ್ನು ತಡೆಯುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.


















