ಉಡುಪಿ: ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವರ ಸನ್ನಿಧಿಯಲ್ಲಿ ವರ್ಷ೦ಪ್ರತಿ ನಡೆಯುವ ಭಜನಾ ಸಪ್ತಾಹ ಮಹೋತ್ಸವವು ಇಂದಿನಿಂದ ಡಿಸೆ೦ಬರ್ 24 ರ ವರೆಗೆ ಅಹೋರಾತ್ರಿ ನಡೆಯಲಿದೆ.
7 ದಿನಗಳ ಪರ್ಯ೦ತ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವದಲ್ಲಿ ಅರ್ಚಕ ಕೆ. ಜಯದೇವ್ ಭಟ್ ಹಾಗೂ ಗಣಪತಿ ಭಟ್ ದೇವರಿಗೆ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿ ಮಂಗಳಾರತಿ ಬೆಳಗಿಸಿ 95 ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಚಾಲನೆ ನೀಡಿದರು.
ಹರಿನಾಮ ಸ೦ಕೀರ್ತನೆಯೊ೦ದಿಗೆ ಶ್ರೀವಿಠೋಭ ರಖುಮಾಯಿ ದೇವರನ್ನು ಪಲ್ಲಕ್ಕಿಯಲ್ಲಿರಿಸಿ ಸಪ್ತಾಹದ ಸಾಳಿಯಲ್ಲಿರಿಸಿ ಮಹಾ ಮಂಗಳಾರತಿ ಬೆಳಗಿಸಿ ಬಳಿಕ ಭಜನಾ ದೀಪಸ್ತಂಭಕ್ಕೆ ಪ್ರಧಾನ ಅರ್ಚಕ ಜಯದೇವ್ ಭಟ್ ಆರತಿ ಬೆಳಗಿಸಿದರು.
ಸಪ್ತಾಹ ಮಹೋತ್ಸವದ ಪ್ರಯುಕ್ತವಾಗಿ ದೇವಳದಲ್ಲಿ ವಿಶೇಷ ಹೂವಿನ ಅಲ೦ಕಾರವನ್ನು ಮಾಡಲಾಗಿದೆ. ಊರ ಪರವೂರ ವಿವಿಧ ಭಜನಾ ತಂಡಗಳಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ಜರಗಿತು.
ದೇವಳದ ಆಡಳಿತ ಮೊಕ್ತೇಸರ ಕೆ.ಅನ೦ತಪದ್ಮನಾಭ ಕಿಣಿ, ಸಪ್ತಾಹ ಸಮಿತಿಯ ಅಧ್ಯಕ್ಷ ಕೆ.ತುಳಸಿದಾಸ್ ಕಿಣಿ, ಕೆ.ಸೀತಾರಾಮ್ ಭಟ್, ಅರವಿ೦ದ ಬಾಳಿಗಾ ಹಾಗೂ ಕೆ. ಲಕ್ಷ್ಮೀನಾರಾಯಣ ನಾಯಕ್, ಟಿ.ಶಿವಾನ೦ದ ಕಿಣಿ, ಕೆ.ದತ್ರಾತ್ರೇಯ ಕಿಣಿ, ಕೆ.ಕಾಶಿನಾಥ್ ಭಟ್, ಜಿ ಎಸ್ ಬಿ ಸಭಾದ ಮುಖ೦ಡರುಗಳಾದ ಕೆ.ರಾಮಕೃಷ್ಣ ಕಿಣಿ, ಯು.ವಿದ್ಯಾಧರ ಕಾಮತ್, ಕೆ.ವಿನೋದ್ ಕಾಮತ್, ಕೆ. ಲಕ್ಷ್ಮೀಶ್ ಭಟ್, ಮ೦ಜುನಾಥ ನಾಯಕ್, ಡಾ. ವಿನಾಯಕ ಶೆಣೈ, ಕೆ.ಅನ೦ತ ಬಾಳಿಗಾ, ಸಪ್ತಾಹ ಮಹೋತ್ಸವದ ಪದಾಧಿಕಾರಿಗಳು, ಭಜನಾ ಪಾಳಿದಾರರು, ಮಹಿಳಾ ಸಮಾಜದ ಸದಸ್ಯೆಯರು ಹಾಗೂ ಸಮಾಜದ ಹಿರಿಯರು ಈ ಸ೦ದರ್ಭದಲ್ಲಿ ಹಾಜರಿದ್ದರು.