‘ಅಡುಗೆ ಮಾಡಲು ಕಲಿ’ ಎಂದ ಅತ್ತೆಯ ಮಾತಿಗೆ ಮನನೊಂದು ಸೊಸೆ ಆತ್ಮಹತ್ಯೆ

 ಚಿಕ್ಕಬಳ್ಳಾಪುರ: ಜಿಲ್ಲೆಯ ಪೆರೇಸಂದ್ರ ಗ್ರಾಮದಲ್ಲಿ ಅತ್ತೆಯ ಸಲಹೆಯನ್ನು ಅಪಾರ್ಥ ಮಾಡಿಕೊಂಡು, 18 ವರ್ಷದ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.

ಕೆಲ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಶ್ರುತಿ, ಗಂಡನ ಮನೆಯಲ್ಲಿ ವಾಸವಾಗಿದ್ದಳು. ಮನೆಯಲ್ಲಿ ಸುಮ್ಮನೆ ಕುಳಿತು ಕಾಲಹರಣ ಮಾಡುವ ಬದಲು, ಅಡುಗೆ ಕಲಿಯಲು ಅತ್ತೆ ಸಲಹೆ ನೀಡಿದ್ದಳು ಎನ್ನಲಾಗುತ್ತಿದೆ. ಆದರೆ ಆ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಯುವತಿ ಮನನೊಂದು ವಿಷ ಸೇವಿಸಿದ್ದಾಳೆ ಎಂದು ತಿಳಿದುಬಂದಿದೆ.

ವಿಷ ಸೇವಿಸಿದ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.