ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ಪೇಜಾವರ ಶ್ರೀಪಾದರು

ತಿರುಪತಿ: ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾನುವಾರ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.

ಟಿಟಿಡಿ ವತಿಯಿಂದ ಶ್ರೀಗಳನ್ನು ಆದರ ಪೂರ್ವಕ ಸ್ವಾಗತಿಸಲಾಯಿತು. ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ, ಸದಸ್ಯ ಡಿ.ಪಿ. ಅನಂತ್ ಹಾಗೂ ಅರ್ಚಕವರ್ಗದವರು ಉಪಸ್ಥಿತರಿದ್ದರು.

ಇದೇ ವೇಳೆ ಶ್ರೀಗಳು ಭೂವರಾಹಸ್ವಾಮಿಯ ದರ್ಶನ ಕೂಡ ಪಡೆದರು. ಲೋಕಕ್ಕೆ ಒದಗಿದ ಕೊರೊನಾ ವಿಪತ್ತು ದೂರವಾಗಿ ಒಳ್ಳೆಯ ಆರೋಗ್ಯ ಶಾಂತಿ ನೆಮ್ಮದಿ ಎಲ್ಲರಿಗೂ ಲಭಿಸಲಿ. ಅಯೋಧ್ಯೆ ರಾಮಮಂದಿರ ಕಾರ್ಯ ಸುಸೂತ್ರವಾಗಿ ನಡೆಯಲೆಂದು ವೆಂಕಟೇಶ ದೇವರಲ್ಲಿ ಶ್ರೀಗಳು ಪ್ರಾರ್ಥಿಸಿದರು.