ಈ ಸ್ವಯಂಕೃತ ಅಪರಾಧಗಳಿಂದಲೇ ನಟ ದರ್ಶನ್ “ಜೈಲು ದರ್ಶನ” ಪಡೆಯೋ ಹಾಗಾಯ್ತು! ಬೆನ್ನು ನೋವಿನ ನೆಪಯೂ ಶಾಪವಾಯ್ತಾ?

ಚಾಲೆಂಜಿಂಗ್ ಸ್ಟಾರ್ ಎಂದು ಖ್ಯಾತಿ ಪಡೆದ ನಟ ದರ್ಶನ್ ಗೆ ರಿಯಲ್ ಜೀವನದಲ್ಲಿ ಇಷ್ಟೊಂದು ಚಾಲೆಂಜ್ ಎದುರಾಗುತ್ತದೆ ಎನ್ನುವುದುನ್ನು ಅವರೂ ಸೇರಿದಂತೆ ಅವರ ಅಭಿಮಾನಿಗಳೂ ಊಹಿಸಿರಲಿಲ್ಲ.ಚಿತ್ರರಂಗದಲ್ಲಿ “ದಾಸ”ನಾಗಿ ಮೆರೆದ ದರ್ಶನ್ ಆಗಾಗ ಜೈಲಿನ “ದಾಸ”ನಾಗುವ ಹಾಗಾಗುತ್ತೆ ಎನ್ನುವ ಕಲ್ಪನೆ ಚಿತ್ರರಂಗಕ್ಕೂ ಇರಲಿಲ್ಲ.  ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಒಮ್ಮೆ ಬಂಧನಕ್ಕೆ ಒಳಗಾಗಿ ನಂತರ ಜಾಮೀನು ಪಡೆದಿದ್ದ ನಟ ದರ್ಶನ್​ಗೆ ಆ ಮೇಲೆಯೂ ಹತ್ತಾರು ಸಂಕಷ್ಟಗಳು ತಲೆ ಮೇಲೇ ಇತ್ತು. ಕೆಲವೊಂದು ಕಾರಣಗಳಿಂದಾಗ ದರ್ಶನ್ ಫ್ಯಾನ್ಸ್ ಗಳೂ ಕೂಡ ಸೋಶಿಯಲ್ ಮೀಡಿಯಾದಲ್ಲಿ  ತಮ್ಮ ಅತೀಯಾದ ಪುಂಡಾಟದಿಂದ ಸುದ್ದಿಯಾಗಿದ್ರು. ಈಗ ಮತ್ತೆ ದರ್ಶನ್ ಜೈಲಿಗೆ ಹೋಗುವ ಸರದಿ.  ದರ್ಶನ್ ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಯ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದು ದರ್ಶನ್ ಅಭಿಮಾನಿಗಳಿಗೆ ದೊಡ್ಡ ಶಾಕಿಂಗ್ ನ್ಯೂಸ್ ಆಗಿದೆ.  ದರ್ಶನ್ ಹೀಗೆ ಜೈಲು ಸೇರಲು ದರ್ಶನ್ ಜಾಮೀನು ರದ್ದಾಗಲು ಅವರು ಮಾಡಿದ ಕೆಲವೊಂದು ಸ್ವಯಂಕೃತ ತಪ್ಪುಗಳೇ ಕಾರಣ.

ಜಾಮೀನು ದುರುಪಯೋಗ ಮಾಡಿಕೊಂಡ್ರಾ:

ದರ್ಶನ್ ಅವರು ಜಾಮೀನು ಪಡೆದ ಬಳಿಕ ಅದನ್ನು ದುರುಪಯೋಗ ಮಾಡಿಕೊಂಡ ಆರೋಪವನ್ನು ಸರ್ಕಾರಿ ಪರ ವಕೀಲರು ಮಾಡಿದ್ದಾರೆ. ಕೆಲು ಕಾರಣ ಹೇಳಿ ಅವರು ನ್ಯಾಯಾಲಯಕ್ಕೂ ಗೈರಾಗುತ್ತಿದ್ದರು. ಬೆನ್ನುನೋವಿನ ನೆಪ ಹೇಳುತ್ತಿದ್ದರು. ಆದರೆ ಕೆಲವೊಂದು ಚಿತ್ರಗಳನ್ನು ಒಪ್ಪಿಕೊಂಡು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದರು. ಚಿತ್ರೀಕರಣ ನಡೆಸುವಾಗ ಬೆನ್ನುನೋವು ಎಲ್ಲಿ ಹೋಗುತ್ತಿತ್ತು ಎಂದು ವಕೀಲರು ಆರೋಪಿಸಿದ್ದರು. ಹಲವು ಚಿತ್ರ ಪ್ರದರ್ಶನದಲ್ಲಿಯೂ ಅವರು ಭಾಗಿಯಾಗಿದ್ದರು. ಇದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಜಾಮೀನು ಸಿಕ್ಕ ಬಳಿಕ ಪ್ರಕರಣದ ಪ್ರಮುಖ ಸಾಕ್ಷಿ ಚಿಕ್ಕಣ್ಣ ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ಇದು ಕೂಡ ದೊಡ್ಡ ತಪ್ಪುಗಳಲ್ಲಿ ಒಂದು ಎಂದು ವಕೀಲರು ಹೇಳಿದ್ದಾರೆ.

ಈ ತಪ್ಪೇ ದರ್ಶನ್​ಗೆ ಮುಳುವಾಗಿದೆ. ಅಲ್ಲದೇ ಹೈಕೋರ್ಟ್ ಮಾಡಿದ ಕೆಲವೊಂದು ತಪ್ಪುಗಳ ಬಗ್ಗೆಯೂ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಮಾಡಿದೆ. ಕೊಲೆ ನಡೆದ ಸ್ಥಳದ ಮಣ್ಣು ಮತ್ತು ದರ್ಶನ್ ಪಾದರಕ್ಷೆಯ ಮಣ್ಣು ಹೊಂದಾಣಿಕೆಯಾಗಿದ್ದು, ಮೃತನ ಡಿಎನ್‌ಎ ಕಲೆಗಳು ಆರೋಪಿಗಳ ಬಟ್ಟೆ ಮೇಲೆ ಪತ್ತೆಯಾಗಿದೆ.  ಆದರೆ ಹೈಕೋರ್ಟ್ ಜಾಮೀನು ತೀರ್ಪು ದಾಖಲೆಗಳಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ದರ್ಶನ್ ಪ್ರಭಾವಿ ವ್ಯಕ್ತಿಯಾಗಿದ್ದು ಅವರು ಕೆಲವೊಂದು ಪ್ರಭಾವ ಬಳಸಿ ಸಾಕ್ಷಿಗಳಿಗೆ ಬೆದರಿಕೆ ಹಾಕು ಸಾಧ್ಯತೆಯೂ ಇದೆ.

ಈ ಪ್ರಕರಣದಲ್ಲಿ ಸಾಕಷ್ಟು ವಿಧಿವಿಜ್ಞಾನ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳಿವೆ. ಎಂದು ಕೋರ್ಟ್ ಹೇಳಿದೆ. ದರ್ಶನ್ ಮೇಲಿನ ಈ ಎಲ್ಲಾ ಆರೋಪಗಳು ನಿಜವೆಂದು ಸಾಬೀತಾಗಿರುವುದೇ ಇದೀಗ ದರ್ಶನ್ ಜೈಲಿನಲ್ಲಿ ಕಂಬಿ ಎಣಿಸಲು ಪ್ರಮುಖ ಕಾರಣ.