ತೆಲುಗು ಚಿತ್ರರಂಗದ ವಿರುದ್ಧ ಸಿಡಿದೆದ್ದ ನಟ ದರ್ಶನ್

ಬೆಂಗಳೂರು: ತೆಲುಗಿನಲ್ಲಿ ಕನ್ನಡ ಚಿತ್ರಗಳ ಬಿಡುಗಡೆಯನ್ನು ತಡೆ ಹಿಡಿದಿರುವ ತೆಲುಗು ಚಿತ್ರರಂಗದ ನಿರ್ಧಾರದ ವಿರುದ್ಧ ನಟ ದರ್ಶನ್ ಸಿಡಿದೆದ್ದಿದ್ದಾರೆ.

ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ಇಂದು ಫಿಲಂ ಚೇಂಬರ್‌ಗೆ ದರ್ಶನ್‌ ದೂರು ನೀಡಲಿದ್ದಾರೆ.
ತೆಲುಗಿನಲ್ಲಿ ಯಾವುದೇ ಸಿನಿಮಾ ರಿಲೀಸ್ ಇಲ್ಲ, ಆದ್ರೂ ಅಲ್ಲಿ ಕನ್ನಡ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡ್ತಾ ಇಲ್ಲ ಎಂದು ತೆಲುಗು ಚಿತ್ರರಂಗದ ಹೊಸ ನೀತಿಯನ್ನು ದರ್ಶನ್ ಖಂಡಿಸಿದ್ದಾರೆ. ಸಣ್ಣ ಪುಟ್ಟ ಸಿನಿಮಾ ರಿಲೀಸ್ ಇದ್ದರೂ ಸಹ ಕನ್ನಡ ಚಿತ್ರಗಳ ಬಿಡುಗಡೆಯನ್ನು ತಡೆ ಹಿಡಿಯಲಾಗುತ್ತಿದೆ ಎಂದು ದರ್ಶನ್​ ಆರೋಪಿಸಿದ್ದಾರೆ.

ಕರ್ನಾಟದಲ್ಲಿ ತೆಲುಗಿನ ಯಾವ ಸಿನಿಮಾ, ಯಾವಾಗ ಬೇಕಾದ್ರೂ ರಿಲೀಸ್ ಮಾಡಿ ಸದ್ದು ಮಾಡುವ ಅವಕಾಶವಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಈಗ ಕನ್ನಡದ ಬಹುತೇಕ ಸಿನಿಮಾಗಳು ತೆಲುಗಿನಲ್ಲೂ ರಿಲೀಸ್ ಆಗ್ತಿವೆ. ರಾಬರ್ಟ್ ಕೂಡ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಆಗ್ತಿದೆ. ತೆಲುಗು ಸಿನಿಮಾರಂಗದ ಈ ಹೊಸ ನೀತಿಯಿಂದ ಕನ್ನಡದ ಬಹುತೇಕ ಸಿನಿಮಾಗಳು ಸಂಕಷ್ಟಕ್ಕೆ ಈಡಾಗಲಿವೆ. ಹೀಗಾಗಿ, ನಮ್ಮಲ್ಲಿ ಕೂಡ ತೆಲುಗು ಸಿನಿಮಾಗಳನ್ನ ತಡೆಹಿಡಿಯಬೇಕು ಎಂಬ ವಿಷಯದ ಬಗ್ಗೆ ಚರ್ಚೆ ನಡೆಸಬೇಕಿದೆ ಎಂಬುದು ದರ್ಶನ್ ಅವರ ಚಿಂತನೆಯಾಗಿದೆ. ಹಾಗಾಗಿ, ಈ ಕುರಿತು ಫಿಲಂ ಚೇಂಬರ್​ನಲ್ಲಿ ದರ್ಶನ್​ ಚರ್ಚೆ ನಡೆಸಲಿದ್ದಾರೆ ತಿಳಿದುಬಂದಿದೆ.