ಧರ್ಮಸ್ಥಳ: ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಶ್ರೀ ವಿಸ್ತೃತ ನೂತನ ಕಟ್ಟಡವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಒಂದು ಸರಕಾರದ ಆಡಳಿತ ವ್ಯವಸ್ಥೆ ಇದ್ದಂತೆ. ವ್ಯಕ್ತಿಯನ್ನು ಜವಾಬ್ದಾರಿಯುತ ನಾಗರಿಕನನ್ನಾಗಿಸುವಲ್ಲಿ ಸರಕಾರಕ್ಕಿಂತಲೂ ಹೆಚ್ಚಿನ ಕೆಲಸ ಮಾಡುತ್ತಿದೆ. ಡಾ. ಹೆಗ್ಗಡೆ ಅವರ ಸ್ವಚ್ಛ ಶ್ರದ್ಧಾಕೇಂದ್ರ ಸ್ವಾತಂತ್ರ್ಯ ಆಂದೋಲನದಂತೆ ಪರಿವರ್ತನೆಯಾಗಿದೆ. ಸೈನಿಕರು ದೇಶರಕ್ಷಣೆ ಮಾಡುತ್ತಿದ್ದಾರೆ ನಾವು ಸ್ವಚ್ಛತೆ ಮೂಲಕ ಸಮಾಜ ರಕ್ಷಣೆ ಮಾಡೋಣ ಎಂದು ಕರೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆ, ಹರ್ಷೇಂದ್ರ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ರಾಜ್ಯದ ವಿವಿಧ ಭಾಗಗಳಿಂದ ಬಂದ ಗ್ರಾಮಾಭಿವೃದ್ದಿ ಸಮಿತಿಯ ಸದಸ್ಯರಿದ್ದರು.