ದೈವಂ ಶರಣಂ ಗಚ್ಛಾಮಿ ಕಿರು ಚಿತ್ರದ ಅಫೀಷಿಯಲ್ ವೀಡಿಯೋ ಬಿಡುಗಡೆ

ಭರ್ಗ ಸಿನಿಮಾಸ್ ಪ್ರಸ್ತುತ ಪಡಿಸುವ ದೈವಂ ಶರಣಂ ಗಚ್ಛಾಮಿ ಕಿರು ಚಿತ್ರದ ಅಫೀಷಿಯಲ್ ವೀಡಿಯೋ ಇಂದು ಸಂಜೆ 4 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಜಯ್ ಮಂಜುನಾಥ್ ನಿರ್ದೇಶನ, ಸಹ ನಿರ್ದೇಶಕರಾಗಿ ರಾಜ್ ಕನಕ, ಡಿಒಪಿ ಮತ್ತು ಸಂಕಲನ ಸುಮಂತ್ ಆಚಾರ್ಯ, ಲೋಕಿ ತವಸ್ಯ ಸಂಗೀತ ಚಿತ್ರಕ್ಕಿದೆ.

ತಾರಾಗಣದಲ್ಲಿ ಪ್ರತೀಕ್ ಶೆಟ್ಟಿ, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಪ್ರತಿಮಾ ನಾಯಕ್, ಚೈತ್ರ, ಹರೀಶ್ ಭಟ್, ಗಣೇಶ್ ಶಶಾಂಕ್ ಮುಂತಾದವರಿದ್ದಾರೆ.

ತುಳುನಾಡಿನ ದೈವಕ್ಕೆ ಸಂಬಂಧಪಟ್ಟ ಕಥಾ ಹಂದರವನ್ನು ಚಿತ್ರವು ಹೊಂದಿದೆ. ಅದಾಗಲೇ ಹಲವಾರು ಕಿರು ಚಿತ್ರಗಳಲ್ಲಿ ನಟಿಸಿರುವ ಪ್ರತೀಕ್ ಶೆಟ್ಟಿ ನಾಯಕನಾಗಿ ಮಿಂಚಿದ್ದಾರೆ. ಕರಾವಳಿ ಕನ್ನಡದಲ್ಲಿ ಚಿತ್ರವು ಮೂಡಿಬಂದಿದೆ.

ತುಳುನಾಡಿನ ದೈವದ ಸುತ್ತ ಕಥೆಯನ್ನು ಹೆಣೆಯಲಾಗಿದ್ದು ಚಿತ್ರವು ಎರಡು ಭಾಗವನ್ನು ಹೊಂದಿದೆ. ಮೊದಲನೆ ಭಾಗವನ್ನು ಕುತೂಹಲಕಾರಿ ಹಂತದಲ್ಲಿ ತಂದು ನಿಲ್ಲಿಸಲಾಗಿದ್ದು, ಎರಡನೇ ಭಾಗಕ್ಕಾಗಿ ಕಾಯುವಂತಾಗಿದೆ.