udupixpress
Home Trending ದ.ಕ.ಜಿಲ್ಲೆ: ಮಾರಕ ಕೊರೊನಾಗೆ ಇಂದು ಮೂವರು ಬಲಿ

ದ.ಕ.ಜಿಲ್ಲೆ: ಮಾರಕ ಕೊರೊನಾಗೆ ಇಂದು ಮೂವರು ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಅಬ್ಬರಕ್ಕೆ ಇಂದು (ಜು.4)ಒಂದೇ ದಿನ ಮೂವರು ಸಾವನ್ನಪ್ಪಿದ್ದಾರೆ.
ದ.ಕ ಜಿಲ್ಲೆಯ ಸುಳ್ಯ ತಾಲೂಕಿನ  ಕೆರೆಮೂಲೆ ಮಹಿಳೆ , ಕೋಡಿಕಲ್ ನ ಮಹಿಳೆ ಮತ್ತು ಕೂಳೂರಿನ ಪುರುಷರೊಬ್ಬರು ಮೃತಪಟ್ಟಿದ್ದಾರೆ.
ಸುಳ್ಯದ ಮಹಿಳೆ ವಾರದ ಹಿಂದೆ ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಎರಡು ದಿನಗಳ ಹಿಂದೆ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು.ಅವರ ಗಂಟಲು ದ್ರವ ಪರೀಕ್ಷೆ ವರದಿ ಬರುವ ಮುಂಚೆ ಸಾವನ್ನಪ್ಪಿದ್ದು ಬಳಿಕ ಇವರಿಗೆ ಕೊರೊನಾ ದೃಢಪಟ್ಟಿದೆ. ಕೂಳೂರು ಮತ್ತು ಕೋಡಿಕಲ್ ನ ವ್ಯಕ್ತಿಗಳಿಬ್ಬರು ಕೊರೊನಾದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

error: Content is protected !!