ಬೆಂಗಳೂರು: ಹಿರಿಯ ರಂಗಕರ್ಮಿ, ರಂಗ ನಿರಂತರದ ಕಾರ್ಯಾಧ್ಯಕ್ಷ ಡಿ.ಕೆ.ಚೌಟ (82)ಅವರು ಬುಧವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚೌಟ ಅವರನ್ನು ಚಿಕಿತ್ಸೆಗಾಗಿ ನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಿ.ಕೆ. ಚೌಟ ಅವರು ಮೂಲತಃ ಮಂಜೇಶ್ವರದ ಮೀಯಪ್ಪಾದು ಎಂಬಲ್ಲಿಯಲ್ಲಿವರು. ಇವರ ಪೂರ್ಣ ಹೆಸರು ದರ್ಬೆ ಕೃಷ್ಣಾನಂದ ಚೌಟ.
ಮುಂಬಯಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಆನಂತರ ಗಾನಾ, ನೈಜೀರಿಯಾ ಮತ್ತು ಲಂಡನ್ ಮೊದಲಾದ ದೇಶದಲ್ಲಿ ನೆಲೆಸಿದ್ದರು. ಆ ಬಳಿಕ ತಮ್ಮಬೆಂಗಳೂರಿಗೆ ಬಂದ ಇವರು ಸಕ್ರಿಯವಾಗಿ ರಂಗಭೂಮಿ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.
ಆನಂದ ಕೃಷ್ಣ ಎಂಬ ಕಾವ್ಯನಾಮದಲ್ಲಿ ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಇವರ ಸೇವೆಗೆ ಕರ್ನಾಟಕ ಸರ್ಕಾರದ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಭಾಜನವಾಗಿವೆ.