ಹುಷಾರ್ :ಈ ಪಾತ್ರೆಗಳಲ್ಲಿ ನೀವು ಮೊಸರು ಸಂಗ್ರಹಿಸಿಟ್ಟರೆ ವಿಷವಾದೀತು ಜೋಕೆ

ಮೊಸರು ಊಟದ ಜೊತೆಗೋ, ಹೀಗೇ ತಿನ್ನಲೋ ದಿನನಿತ್ಯವೂ ನಾವು ಬಳಸಿಯೇ ಬಳಸುತ್ತೇವೆ. ತುಂಬಾ ಮಂದಿ ಮೊಸರನ್ನು ಪ್ಯಾಕೇಟಿನಲ್ಲಿಯೇ ಕುಡಿದರೆ, ಹೆಚ್ಚಿನ ಮಂದಿ ಮೊಸರನ್ನು ಬೇರೆ ಪಾತ್ರೆಗಳಲ್ಲಿ ಸಂಗ್ರಹಿಸಿ ಸೇವಿಸುತ್ತಾರೆ. ಆದರೆ  ಮೊಸರನ್ನು ಕೆಲವು ರೀತಿಯ ಪಾತ್ರೆಗಳಲ್ಲಿಸಂಗ್ರಹಿಸಿ ಇಡಲೇಬಾರದು ಇಟ್ಟರೆ ಅದು ವಿಷವಾಘುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಹಿತ್ತಾಳೆ ತಾಮ್ರದಲ್ಲಿ ವಿಷವಾಗುತ್ತಾ?

ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಲ್ಲಿ ಮೊಸರು ಸಂಗ್ರಹಿಸಿಡಬಾರದಂತೆ. ಇಟ್ಟರೆ ಮೊಸರು ವಿಷವಾಗುತ್ತದಂತೆ. ತಾಮ್ರ ಮತ್ತು ಹಿತ್ತಾಳೆ ಲೋಹಗಳೆರಡೂ ಆಮ್ಲೀಯ ವಸ್ತುಗಳೊಂದಿಗೆ ರಾಸಾಯನಿಕವಾಗಿ ಪ್ರತಿಕ್ರಿಯಿಸುತ್ತವೆ.ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

 ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದೆ. ಅದನ್ನು ಈ ಲೋಹದ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟಾಗ, ರಾಸಾಯನಿಕ ಕ್ರಿಯೆಯು ತಾಮ್ರದ ಸಲ್ಫೇಟ್ ಅಥವಾ ಇತರ ವಿಷಕಾರಿ ಸಂಯುಕ್ತಗಳ ರಚನೆಗೆ ಕಾರಣವಾಗಿ ಆ ಸಂಯುಕ್ತಗಳು ದೇಹವನ್ನು ಪ್ರವೇಶಿಸಿ ವಿಷಕಾರಿ ಪರಿಣಾಮಗಳನ್ನು ಬೀರುತ್ತವೆ. ಇದು ಹೊಟ್ಟೆ ನೋವು, ವಾಂತಿ, ವಾಕರಿಕೆ, ತಲೆನೋವು ಮತ್ತು ಗಂಭೀರ ಸಂದರ್ಭಗಳಲ್ಲಿ ಆಹಾರ ವಿಷವಾಗಿ ಬದಲಾಗುವ ಸಾಧ್ಯತೆ  ಇರುತ್ತದೆ ಎನ್ನುತ್ತದೆ ಸಂಶೋಧನಾ ವರದಿ.

ಮೊಸರು ಹಾಕಲು ಗಾಜು, ಜೇಡಿಮಣ್ಣಿನ ಪಾತ್ರೆ, ಸೆರಾಮಿಕ್ ಅಥವಾ ಉಕ್ಕಿನ ಪಾತ್ರೆಗಳನ್ನು ಬಳಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಈ ಪಾತ್ರೆಗಳು ಮೊಸರಿನ ರಾಸಾಯನಿಕ ಗುಣಗಳನ್ನು ಸಂರಕ್ಷಿಸುತ್ತವೆ ಹಾಗಾಗಿ ಮುಂದೆ ಮೊಸರು ಆರೋಗ್ಯಕ್ಕೆ ಎಷ್ಟು ಹಿತವೋ ಅಷ್ಟೇ ಮುಖ್ಯ ಆ ಮೊಸರನ್ನು ಸಂಗ್ರಹಿಸಿಡುವ ಪಾತ್ರೆಯೂ ಕೂಡ ಎನ್ನುವುದನ್ನು ಮನಸ್ಸಿನಲ್ಲಿಡಿ.