ತ್ರಿಶಾ ಕ್ಲಾಸಸ್: ಸಿಎಸ್ ಎಕ್ಸಿಕ್ಯೂಟಿವ್ ಪೂರ್ವಸಿದ್ಧತಾ ಪರೀಕ್ಷೆ ಆರಂಭ

ಉಡುಪಿ: ಸಿ ಎ, ಸಿ ಎಸ್ ಮುಂತಾದ ವೃತ್ತಿಪರ ಶಿಕ್ಷಣಕ್ಕೆ ಹೆಸರುವಾಸಿಯಾದ ತ್ರಿಶಾ ಕ್ಲಾಸಸ್ ವತಿಯಿಂದ ಜೂನ್ ತಿಂಗಳಲ್ಲಿ ಸಿಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆಯು (ಮೋಕ್ ಟೆಸ್ಟ್) ಮೇ 6 ರಿಂದ ಆರಂಭವಾಗಲಿದೆ. ಪರೀಕ್ಷೆಗಳು ಐ.ಸಿ.ಎಸ್.ಐ. ಮಾದರಿಯಲ್ಲಿಯೇ ನಡೆಯಲಿದ್ದು , ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಹಾಯವಾಗುತ್ತದೆ.

ಆಸಕ್ತರು ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಚೇರಿಯನ್ನು ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಮತ್ತು ತ್ರಿಶಾ ಕ್ಲಾಸಸ್, ಶ್ರೀನಿಧಿ ಕಾಂಪ್ಲೆಕ್ಸ್, 2ನೇ ಮಹಡಿ, ಅಳಕೆ ಮಂಗಳೂರಿಗೆ ಭೇಟಿ ಮಾಡಬಹುದು.