ಉಡುಪಿ: ಬಾಲಿವುಡ್‌ನ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಸೋನಿ ಟಿವಿಯಲ್ಲಿ ನಡೆಸಿಕೊಡುವ ಜನಪ್ರಿಯ ಕ್ವಿಝ್ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿಯ ಸ್ಟುಡೆಂಟ್ ಸ್ಪೆಷಲ್‌ನಲ್ಲಿ’ ಭಾಗವಹಿಸಿದ್ದ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಏಳನೇ ತರಗತಿ ವಿದ್ಯಾರ್ಥಿ ಅನಾಮಯ ಯೋಗೀಶ್ ದಿವಾಕರ್ ಒಂದೇ ಒಂದು ಪ್ರಶ್ನೆಯಿಂದ ಕೋಟಿ ರೂ. ಮಿಸ್ ಮಾಡಿಕೊಂಡಿದ್ದಾನೆ.
ನಿನ್ನೆ ಎರಡು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ ₹ 2 ಸಾವಿರ ಗೆದ್ದಿದ್ದ ಅನಾಮಯನ ಆಟವನ್ನು ಇಂದಿಗೆ ಕಾದಿರಿಸಲಾಗಿತ್ತು. ಆದರೆ ಇಂದು ₹ 50 ಲಕ್ಷ ರೂ. ವರೆಗೆ ಸರಿ ಉತ್ತರ ನೀಡಿದ ಅನಾಮಯ, ಒಂದು ಕೋಟಿಗೆ ಕೇಳಲಾದ ಕುರುಕ್ಷೇತ್ರ ಯುದ್ದದ ಬಗ್ಗೆಗಿನ ಪ್ರಶ್ನೆಗೆ ಉತ್ತರಿಸದೆ ಆಟ ಕ್ವಿಟ್ ಮಾಡಿದ್ದಾನೆ. ಆದರೂ ಅನಾಮಯ ₹ 50 ಲಕ್ಷ ನಗದು ಬಹುಮಾನ ಮುಡಿಗೇರಿಸಿಕೊಂಡಿದ್ದಾನೆ.












