ಮಂಗಳೂರು: ಬೈಕ್ -ಬಸ್ ನಡುವೆ ರಸ್ತೆ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಕೊಣಾಜೆ ಬಳಿ ಗುರುವಾರ ಸಂಭವಿಸಿದೆ. ಪಜೀರು ಗ್ರಾಮದ ಕಂಬಳಪದವು ನಿವಾಸಿ ಅರ್ಶಿತ್ ಶೆಟ್ಟಿ (21) ಮೃತಪಟ್ಟರು. ಡಿಕ್ಕಿಯಾದ ರಭಸದಲ್ಲಿ ಬೈಕ್ ಸವಾರನ ತಲೆಯ ಮೇಲಿನಿಂದ ಬಸ್ ಸರಿದಿದ್ದು, ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.