ಮಂಗಳೂರು: ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ರಾಜೇಶ್ ಭಟ್ (48) ಅವರು ನಗರದ ಮಂಗಳಾ ಸ್ಟೇಡಿಯಂನಲ್ಲಿ ಜೂ.22 ರಂದು ಬ್ಯಾಡ್ಮಿಂಟನ್ ಪಂದ್ಯಾಟ ಆಡುತ್ತಿದ್ದ ವೇಳೆ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಮಣ್ಣಗುಡ್ಡೆಯ ಗಾಂಧಿನಗರದ ತಮ್ಮದೇ ಪಾಲುದಾರಿಕೆಯ “ಭಟ್ ನರ್ಸಿಂಗ್ ಹೋಮ್ ” ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕುಸಿದು ಬಿದ್ದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಡಾ.ರಾಜೇಶ್ ಅವರು ಪ್ರಸಿದ್ಧ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿದ್ದ ದಿ. ಡಾ.ಮಾಲತಿ ಭಟ್ ಅವರ ಪುತ್ರರಾಗಿದ್ದರು.
ಪಂದ್ಯಾಟದ ವೇಳೆ ಇವರು ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ.
ಮೃತರು ಪತ್ನಿ ಡಾ.ವೀಣಾ ಭಟ್ ಮತ್ತು ಕುಟುಂಬ ಸದಸ್ಯರನ್ನು ಅಗಲಿದ್ದಾರೆ.