ಮಂಗಳೂರು: ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ, ಕ್ಯಾಪ್ಟಲ್ ಕೂಲ್ ಎಂ.ಎಸ್ ಧೋನಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಕರ್ನಾಟಕದ ಗಡಿ ಜಿಲ್ಲೆಯಾದ ಕಾಸರಗೋಡಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ತೆರಳುವ ಸಂದರ್ಭ ಮುಂಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಆ ಬಳಿಕ ಶಾಸಕ ಖಾದರ್ ಅವರ ಸಹೋದರ ಯು.ಟಿ ಇಫ್ತಿಕಾರ್ ಅವರ ಕಾರಿನಲ್ಲಿ ಕಾಸರಗೋಡಿನ ಬೇಕಲ್ ಗೆ ತೆರಳಿದ್ದಾರೆ.
ಕಾಸರಗೋಡಿನಲ್ಲಿ ನಡೆಯಲಿರುವ ತಮ್ಮ ಸ್ನೇಹಿತ ಡಾ. ಶಾಜಿರ್ ಗಫಾರ್ ಅವರ ತಂದೆ ಪ್ರೊ.ಅಬ್ದುಲ್ ಗಫಾರ್ ಅವರ ಆತ್ಮಕಥನ ಬಿಡುಗಡೆ ಸಮಾರಂಭದಲ್ಲಿ ಧೋನಿ ಭಾಗವಹಿಸಲಿದ್ದಾರೆ.