ಕೋಲ್ಕತ್ತಾ : ಕೋಲ್ಕತ್ತಾ ದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕಪ್ ೨೦೨೩ ರ್ ೩೭ ಪಂದ್ಯದಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಹಣಾಹಣಿಯಲ್ಲಿದ್ದವು. ಭಾರತ ಟಾಸ್ ಗೆಲ್ಲುವುದರ ಮೂಲಕ ಬ್ಯಾಟಿಂಗ್ ಅನ್ನು ಆಯ್ಕೆ ಮಾಡಿ ೩೨೬ ರನ್ಗಳ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾಗೆ ೩೨೭ ರನ್ ಗಳ ಗೆಲುವಿನ ಗುರಿಯನ್ನು ನೀಡಿತು.
ಬ್ಯಾಟಿಂಗ್ ಆಯ್ದ ಭಾರತ ಮೊದಲಿಗೆ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮ ಕ್ರಮವಾಗಿ ೨೩(೨೪), ೪೦(೨೪) ರನ್ ಗಳನ್ನು ಮಾಡಿ ನಂತರ ವಿರಾಟ್ ಕೊಹ್ಲಿ ೧೦೧(೧೨೧) , ಶ್ರೇಯಸ್ ಅಯ್ಯರ್ ೭೭(೮೭) ಹಾಗೂ ಕೆಎಲ್ ರಾಹುಲ್ ೮(೧೭) ರನ್ ಗಳನ್ನು ೫೦ ಓವರ್ ಗಳಲ್ಲಿ ಮಾಡಿ ದಕ್ಷಿಣ ಆಫ್ರಿಕಾಗೆ ೩೨೭ ರನ್ ಗಳ ಟಾರ್ಗೆಟ್ ಅನ್ನು ನೀಡಿತ್ತು.
ಆದರೆ ದಕ್ಷಿಣ ಆಫ್ರಿಕಾಗೆ ಭಾರತವು ಬೌಲಿಂಗ್ನಲ್ಲಿ ತನ್ನ ಸಾಮರ್ಥ್ಯವನ್ನು ತೋರ್ಪಡಿಸಿದೆ. ದಕ್ಷಿಣ ಆಫ್ರಿಕಾ ತಂಡವು ೨೭ ಗಳನ್ನೂ ಓವರ್ ಗಳಲ್ಲಿ ಕೇವಲ ೮೩ ರನ್ ಗಳನ್ನು ಮಾಡಿದೆ. ರವೀಂದ್ರ ಜಡೇಜಾ (೫), ಶಮಿ (೨), ಕುಲದೀಪ್ (೨) ಹಾಗೂ ಸಿರಾಜ್ (೧) ವಿಕೆಟ್ ತೆಗೆದುಕೊಳ್ಳುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದೆ.
ಹುಟ್ಟಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳು : ವಿರಾಟ್ ಕೊಹ್ಲಿಯ ಹುಟ್ಟುಹಬ್ಬದ ಸಂಭ್ರಮ ದಲ್ಲಿ ಶತಕ ಬಾರಿಸುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. ಅದಲ್ಲದೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಅವರ ೪೯ ಶತಕಗಳ ದಾಖಲೆ ಮುರಿಯುವ ಮೂಲಕ ತಮ್ಮದೇ ದಾಖಲೆಯನ್ನು ಬರೆದಿದ್ದಾರೆ. ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ೨೪೩ ರನ್ ಗಳ ದಾಖಲೆಯ ಗೆಲುವನ್ನು ಸಾಧಿಸಿದೆ.