ಬ್ರಹ್ಮಾವರ – ಮಾಬುಕಳದಲ್ಲಿ “ರಿಪಬ್ಲಿಕ್ ಡೇ ಕಪ್” : ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ತಂಡಕ್ಕೆ ಸರಣಿ

ಬ್ರಹ್ಮಾವರ: ಲೇದರ್ ಬಾಲ್ ಕ್ರಿಕೆಟ್ ನಲ್ಲಿ ಯುವ ಪ್ರತಿಭೆಗಳನ್ನು ತರಬೇತಿ ನೀಡಿ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ಉದ್ದೇಶದಿಂದ ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜ್ ಬ್ರಹ್ಮಾವರದ ಪ್ರಾಧ್ಯಾಪಕರು ಹಾಗೂ ಕ್ರಿಕೆಟ್ ಕೋಚ್ ಆಗಿರುವ ವಿಜಯ್ ಆಳ್ವರವರ ಮುಂದಾಳತ್ವದ ಬೆಳ್ಳಿಪಾಡಿ ಕ್ರಿಕೆಟ್ ಅಕಾಡೆಮಿ ಬ್ರಹ್ಮಾವರ, ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ಹಾಗೂ ಚೇತನ ಹೈ ಸ್ಕೂಲ್ ನ ಸಹಭಾಗಿತ್ವದೊಂದಿಗೆ ಜನವರಿ 26 ರಂದು ಗಣರಾಜ್ಯೋತ್ಸವದ ಪ್ರಯುಕ್ತ 13 ವರ್ಷಗಳ ಕೆಳಗಿನ ವಯೋಮಿತಿಯವರಿಗೆ  “ರಿಪಬ್ಲಿಕ್ ಡೇ ಕಪ್” ಎಂಬ ನಾಲ್ಕು ಪಂದ್ಯಗಳ ಸರಣಿ ಪಂದ್ಯಾಟ ಚೇತನ ಹೈ ಸ್ಕೂಲ್ ಮೈದಾನ ಮಾಬುಕಳದಲ್ಲಿ ನಡೆಯಿತು.

 ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ತಂಡ, 4 ಪಂದ್ಯಗಳ ಸರಣಿಯಲ್ಲಿ 3 ರಲ್ಲಿ ಗೆಲುವು ಸಾಧಿಸಿ ಸರಣಿ ಗೆದ್ದುಕೊಂಡಿತು.

 ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ  ಪ್ರೊ.ಸುರೇಶ್ ಕೆ.ಆರ್ ಶೆಟ್ಟಿ,  ಪ್ರೊ. ಬಾಲಕೃಷ್ಣ ಶೆಟ್ಟಿ, ಇಬ್ರಾಹಿಮ್ ಸಾಹೇಬ್,  ದೈಹಿಕ ಶಿಕ್ಷಕ ಹರ್ಷವರ್ಧನ ಶೆಟ್ಟಿ ,  ಕೋಚ್ ವಿಜಯ್ ಆಳ್ವ ಹಾಗೂ ಕೆಆರ್ ಎಸ್ ಸಿಎಯ  ಉದಯ್ ಕುಮಾರ್ ವೈ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಭರತ್ ಕುಮಾರ್ ಶೆಟ್ಟಿ  ಕ್ರೀಡಾಳುಗಳಿಗೆ ಶುಭ ಹಾರೈಸಿದರು.

 ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ನ ಖಲೀಲ್ ಕೆರಾಡಿ ಮಾತನಾಡಿ, ಯುವ ಆಟಗಾರರು ಹೆಚ್ಚೆಚ್ಚು ತರಬೇತಿ ಪಡೆಯಬೇಕು ಎಂದರು. ಅತಿಥಿಗಳಾಗಿ ಗಣೇಶ್ ಜಿ. , ಸುನೀಲ್ ಕುಮಾರ್ ,ಪ್ರಶಾಂತ್ ಕುಂದರ್ ಪ್ರಧಾನ ಕಾರ್ಯದರ್ಶಿ ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ನ ಸದಸ್ಯರು ಉಪಸ್ಥಿತರಿದ್ದರು.  ವಿಜಯ್ ಆಳ್ವ ನಿರೂಪಿಸಿ, ಸ್ವಾಗತಿಸಿದರು, ಉದಯ್ ಕುಮಾರ್ ವಂದಿಸಿದರು.