ದ್ವಿತೀಯ ಪಿಯುಸಿ ಫಲಿತಾಂಶ: 100% ಫಲಿತಾಂಶ ಸಾಧಿಸಿದ ಕ್ರಿಯೇಟಿವ್ ಕಾಲೇಜು

ಕಾರ್ಕಳ: ಹಿರ್ಗಾನದಲ್ಲಿರುವ ಕ್ರಿಯೇಟಿವ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ರಿಶೆಲ್ ಜೆಸ್ಸಿಕಾ ಸಲ್ಡಾನ ಮತ್ತು ರಿಧಿ ಎಸ್. ಕುಂಟಾಡಿ 591 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 8 ನೇ ಸ್ಥಾನ ಗಳಿಸಿದ್ದರೆ, ಸಹನಾ ಕಾಟೇನ ಹಳ್ಳಿ 591 ಅಂಕದೊಂದಿಗೆ 9 ನೇ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದ ಅಶ್ವಿತಾ 590 ಅಂಕ ಪಡೆದು 7 ನೇ ಸ್ಥಾನ ಪಡೆದಿದ್ದರೆ, ಅನಘ್ ಜಿ ಗೌಡ 589 ಅಂಕ ಪಡೆದು 8ನೇ ಸ್ಥಾನ, ಸುಮಾ ಮತ್ತು ಅನನ್ಯ ಹೆಗಡೆ 588 ಅಂಕಗಳನ್ನು ಪಡೆದು 9 ನೇ ಸ್ಥಾನ ಗಳಿಸಿದ್ದಾರೆ.

ಒಟ್ಟು 112 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 61 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಗಣಿತದಲ್ಲಿ 39, ಭೌತಶಾಸ್ತ್ರದಲ್ಲಿ 10, ರಸಾಯನಶಾಸ್ತ್ರದಲ್ಲಿ 10, ಜೀವಶಾಸ್ತ್ರದಲ್ಲಿ 7, ಕನ್ನಡದಲ್ಲಿ 1, ಸಂಸ್ಕೃತದಲ್ಲಿ 3, ವ್ಯವಹಾರ ಅಧ್ಯಯನದಲ್ಲಿ 5, ಲೆಕ್ಕ ಶಾಸ್ತ್ರದಲ್ಲಿ 11, ಗಣಕ ವಿಜ್ಞಾನದಲ್ಲಿ 30 ವಿದ್ಯಾರ್ಥಿಗಳು ವಿಷಯವಾರು ಪೂರ್ಣಾಂಕವನ್ನು ಪಡೆದಿದ್ದಾರೆ.