ಹರ್ಯಾಣದ ಪ್ರಾಧ್ಯಾಪಕರಾದ ಡಾ ಶಿವದರ್ಶನ್ ಮಲಿಕ್ ಅವರು ಪರಿಸರ ಸ್ನೇಹಿ ಆವಿಷ್ಕಾರವನ್ನು ಕಂಡುಹಿಡಿದ್ದಾರೆ ಮತ್ತು ಇದು ಭವಿಷ್ಯದಲ್ಲಿ ಮನೆಯಲ್ಲಿ ಬಳಕೆಯಾಗುವ ವಾತಾನುಕೂಲಕ(ಎಸಿ)ಗಳ ಅಗತ್ಯವನ್ನು ಇಲ್ಲವಾಗಿಸಬಹುದು ಎಂದು ಭಾವಿಸಲಾಗಿದೆ. ಶಿವದರ್ಶನ್ ಅವರು ಹಸುವಿನ ಸಗಣಿಯಿಂದ ಪ್ಲಾಸ್ಟರ್ಗಳನ್ನು ಮತ್ತು ಬೇವಿನಿಂದ ಇಟ್ಟಿಗೆಗಳನ್ನು ಮಾಡುವ ವಿನೂತನ ವಿಧಾನವನ್ನು ಕಂಡುಹಿಡಿದಿದ್ದಾರೆ. ಮನೆಯಲ್ಲಿ ಇವುಗಳ ಅಳವಡಿಕೆಯಿಂದ ತಾಪಮಾನವು 7 ಡಿಗ್ರಿ ತಂಪಾಗಿರುತ್ತದೆ. ಇವು ಶಾಖ ಮತ್ತು ಗಮನಾರ್ಹ ಇಂಗಾಲದ ಹೆಜ್ಜೆಗುರುತನ್ನು ಉತ್ಪಾದಿಸುವ ಕಾಂಕ್ರೀಟ್ನ ಅಗತ್ಯವನ್ನು ಕಡಿಮೆ ಮಾಡುತ್ತದೆ. ಈ ವಿಧಾನದಿಂದ ಎಸಿ ಬಳಕೆಯ ಅಗತ್ಯವೂ ಇಲ್ಲವಾಗುತ್ತದೆ.
Cow Dung-Neem Plaster Helps Indian 🇮🇳 Professor Earn Rs 10 Lakh/Year
Haryana's Dr Shivdarshan Malik has innovated a 'Vedic Plaster' & bricks made out of cow dung and neem to keep homes cooler by 7 degrees. A great circular economy!
— Erik Solheim (@ErikSolheim) November 22, 2022
ದಿ ಬೆಟರ್ ಇಂಡಿಯಾದ ವರದಿಯ ಪ್ರಕಾರ, ಇಂಗಾಲದ ಹೊರಸೂಸುವಿಕೆ ಮತ್ತು ಅದರ ಅಡ್ಡ ಪರಿಣಾಮಗಳನ್ನು ಪರಿಹರಿಸಲು ಶಿವದರ್ಶನ್ ಒಂದು ಹೊಸ ಆವಿಷ್ಕಾರವಾಗಿ ಹಸುವಿನ ಸಗಣಿ, ಮಣ್ಣು, ಕಹಿ ಬೇವಿನ ಎಲೆ ಮತ್ತು ಇತರ ಹಲವಾರು ನೈಸರ್ಗಿಕ ಸಂಪನ್ಮೂಲಗಳಿಂದ ತಯಾರಿಸಿದ ವೇದಿಕ್ ಪ್ಲಾಸ್ಟರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ವೇದಿಕ್ ಪ್ಲಾಸ್ಟರ್ಗಳನ್ನು ಹೊಂದಿರುವ ಮನೆಗಳ ಒಳಭಾಗವು ಸಿಮೆಂಟ್-ಪ್ಲಾಸ್ಟರ್ ಮಾಡಿದ ಮನೆಗಳಿಗಿಂತ ತಂಪಾಗಿರುತ್ತದೆ. ಏಕೆಂದರೆ, ಈ ಗಾಳಿಯಾಡಬಲ್ಲ ಪ್ಲಾಸ್ಟರ್ ಹೊರಗಿನ ಶಾಖವನ್ನು ಭೇದಿಸಲು ಅನುಮತಿಸುವುದಿಲ್ಲ. ಫ್ಯಾನ್ ಅಥವಾ ಎಸಿ ಅಗತ್ಯ ಹೆಚ್ಚಿಲ್ಲದಿರುವುದರಿಂದ ಇದು ನಿವಾಸಿಗಳಿಗೆ ಅವರ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
1995 ರಲ್ಲಿ, ಡಾ ಶಿವದರ್ಶನ್ ತಮ್ಮ ಪಿಎಚ್ಡಿಯನ್ನು ಹರಿಯಾಣದ ರೋಹ್ಟಕ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದರು. ಶೀಘ್ರದಲ್ಲೇ, ಅವರು ಸೋನಿಪತ್ನ ಮುರ್ತಾಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. ಆದರೆ ಈ ವೃತ್ತಿಯು ಅವರಿಗೆ ಸಂತೃಪ್ತಿಯನ್ನು ಕೊಡಲಿಲ್ಲ ಮತ್ತು ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಬಯಸಿದ್ದರು. 1997 ರಲ್ಲಿ ಅವರು ತಮ್ಮ ವೃತ್ತಿಯನ್ನು ತೊರೆದರು ಮತ್ತು ಐಐಟಿ-ದೆಹಲಿ, ವಿಶ್ವ ಬ್ಯಾಂಕ್ ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಲಹೆಗಾರರಾಗಿ ಪರಿಸರ ಮತ್ತು ಸುಸ್ಥಿರತೆಗೆ ಸಂಬಂಧಿಸಿದ ಅನೇಕ ಯೋಜನೆಗಳಲ್ಲಿ ಕೆಲಸ ಮಾಡಿಲು ಪ್ರಾರಂಭಿಸಿದರು.
ಶತಮಾನಗಳಿಂದ ಹಳ್ಳಿಗಳಲ್ಲಿ ಗೋವಿನ ಸೆಗಣಿಯಿಂದ ಮನೆಗಳನ್ನು ಸಾರಿಸುವುದನ್ನು ಕಂಡಿದ್ದ ಶಿವದರ್ಶನ್ ಅದರಿಂದ ಪ್ರೇರಣೆ ಪಡೆದು ಈ ಪರಿಸರ ಸ್ನೇಹಿ ಪ್ಲಾಸ್ಟರ್ ಮತ್ತು ಇಟ್ಟಿಗೆಗಳನ್ನು ತಯಾರಿಸಿದ್ದಾರೆ. ‘ಗೋಕ್ರಿಟ್’ ಇಟ್ಟಿಗೆಗಳು, ಹಸುವಿನ ಸಗಣಿ ಮತ್ತು ಇತರ ಪರಿಸರ ಸ್ನೇಹಿ ಮತ್ತು ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ತಯಾರಿಸಲ್ಪಟ್ಟಿದೆ. ಈ ಇಟ್ಟಿಗೆಗಳು ಕಟ್ಟಡಗಳಿಗೆ ಪ್ರವೇಶಿಸುವ ಶಾಖವನ್ನು 70% ವರೆಗೆ ನಿರ್ಬಂಧಿಸಬಹುದು ಮತ್ತು ಸಾಂಪ್ರದಾಯಿಕ ಇಟ್ಟಿಗೆಗಳಿಂತ ಏಳು ಪಟ್ಟು ಕಡಿಮೆ ವೆಚ್ಚದಾಯಕವಾಗಿದೆ. ಈ ಸುಸ್ಥಿರ ವ್ಯವಹಾರದಿಂದ ಶಿವದರ್ಶನ್ ವಾರ್ಷಿಕ 10 ಲಕ್ಷ ರೂ ಆದಾಯ ಗಳಿಸುತ್ತಾರೆ. ವಿಚಾರಣೆ ಮತ್ತು ಆರ್ಡರ್ಗಾಗಿ ಶಿವದರ್ಶನ್ ಅವರನ್ನು 9812054982 ನಲ್ಲಿ ಸಂಪರ್ಕಿಸಬಹುದು.
ಮಾಹಿತಿ ಕೃಪೆ: ದ ಬೆಟರ್ ಇಂಡಿಯಾ