ಉಡುಪಿ ಏ.29: ಕರ್ನಾಟಕ ರಾಜ್ಯಾದಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದ ಅಸಹಾಯಕ ಜನತೆ ಹಾಗೂ ಸಂತ್ರಸ್ಥರ ನೆರವಿಗೆ ಸಹಕಾರಿಯಾಗಲು ದಕ್ಷಿಣಕನ್ನಡ ಸಹಕಾರಿ ಹಾಲು ಒಕ್ಕೂಟದ ಉಭಯ ಜಿಲ್ಲೆಗಳ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ದೇಣಿಗೆ ಮೊತ್ತ, ಒಕ್ಕೂಟದ ಸಿಬ್ಬಂದಿಗಳ ಒಂದು ದಿನದ ವೇತನ ಮೊತ್ತ ಸೇರಿದಂತೆ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು ಒಟ್ಟಾಗಿ ರೂ.50 ಲಕ್ಷ ಸಹಾಯಧನದ ಚೆಕ್ನ್ನು ಏಪ್ರಿಲ್ 28 ರಂದು ಸಹಕಾರ ಸಚಿವರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆಯವರು ಹಸ್ತಾಂತರಿಸಿದರು.
ಈ ಸಮಯದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಪುತ್ತೂರು ಶಾಸಕರಾದ ಸಂಜೀವ ಮಠಂದೂರು, ಕ್ಯಾಂಪ್ಕೊ ಅಧ್ಯಕ್ಷ ಶ್ರೀಸತೀಶ್ಚಂದ್ರ ಮತ್ತು ಡಾ. ಜಿ.ವಿ.ಹೆಗ್ಡೆ, ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.