ಉಡುಪಿ: ಮಲ್ಪೆ ಬಂದರಿನ ಅವ್ಯವಸ್ಥೆಯನ್ನು ನಾವು ಸರಿಪಡಿಸಬೇಕು. ಡ್ರೈನೇಜ್, ಮನೆ ಕಟ್ಟಲು ಲೈಸೆನ್ಸ್, ನಿರುದ್ಯೋಗ, ಕುಡಿಯುವ ನೀರಿನ ಸಮಸ್ಯೆಗಳನ್ನು ಬಿಜೆಪಿ ಸರಕಾರ ಪರಿಹರಿಸಿಲ್ಲ. ಭೃಷ್ಟಾಚಾರದಿಂದ ಕೂಡಿದ ಬಿಜೆಪಿ ಸರಕಾರ ಜನತೆಗೆ ದೌರ್ಜನ್ಯವೆಸಗುತ್ತಿದೆ. ಬಡವರಿಗೆ ಬೇಕಾದ ಗ್ಯಾರಂಟಿ ಕಾರ್ಡ್ ವ್ಯವಸ್ಥೆ ಮಾಡಬೇಕು. ಎಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.
ಅವರು ವಿಧಾನ ಸಭಾ ಚುನಾವಣೆ ಪೂರ್ವಭಾವಿಯಾಗಿ ಕಾಂಗ್ರೆಸ್ ಬ್ಲಾಕ್ ಮಟ್ಟದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮೂಡುಬೆಟ್ಟು ವಾರ್ಡ್ ಕಾಂಗ್ರೆಸ್ ಮುಖಂಡರಾದ ಉದಯ ಪೂಜಾರಿ ನೇತೃತ್ವದಲ್ಲಿ ಮುನೀರ್ ಅವರ ಮನೆಯಲ್ಲಿ ನಡೆಯಿತು.
ಸಭೆಯಲ್ಲಿ ಅಮೃತ್ ಶೆಣೈ, ಕುಶಲ್ ಶೆಟ್ಟಿ, ಗಣೇಶ್ ನೆರ್ಗಿ, ಮಹಾಬಲ ಕುಂದರ್, ರವಿರಾಜ್, ಶ್ರೀಮತಿ ಶೋಭಾ, ಸುಕೇಶ್, ಪ್ರಶಾಂತ ಪೂಜಾರಿ, ನಾಸಿರ್, ಉದಯ, ಸುರೇಶ್ ಬನ್ನಂಜೆ, ಹಾರ್ಮಿನ್ ನೋರೊನಾ, ಹಿರಿಯರು ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.