ಕೊರೊನಾ ಎಫೆಕ್ಟ್: ಮಂಗಳೂರು ಯುವಕನ ಮದುವೆ‌ ಮುಂದೂಡಿಕೆ

ಮಂಗಳೂರು: ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಮಂಗಳೂರಿನ ಯುವಕನೋರ್ವನ ಮದುವೆ ಮುಂದೂಡಿಕೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಫೆ.‌10ರ ಸೋಮವಾರದಂದು ಮಂಗಳೂರಿನ ಬೆಂದೂರ್‌ವೆಲ್‌ನ ಸಂತ ಸೆಬಾಸ್ಟಿಯನ್ ಚರ್ಚ್ ನ ಪ್ಲಾಟಿನಂ ಜುಬಿಲಿ ಆಡಿಟೋರಿಯಂನಲ್ಲಿ ಮಂಗಳೂರಿನ ಕುಂಪಲದ ಗೌರವ್ ಎಂಬುವವರ ವಿವಾಹ ನಡೆಯಬೇಕಿತ್ತು. ವರ ಗೌರವ್, ಹಾಂಕಾಂಗ್, ಸಿಂಗಾಪುರ ಹಾಗೂ ಥೈವಾನ್ ನಡುವೆ ಸಂಚರಿಸೋ ಪ್ರವಾಸಿ ಹಡಗಿನ ಸಿಬ್ಬಂದಿ. ಫೆಬ್ರವರಿ 4ರಂದು ಮನೆಗೆ ಬರುವುದಾಗಿ ಹೇಳಿದ್ದರು, ಹೀಗಾಗಿ ಮದುವೆಗಾಗಿ ಎಲ್ಲಾ ಸಿದ್ದತೆಗಳು ನಡೆದಿದ್ದು, ಈ ಮಧ್ಯೆ ಹಾಂಕಾಂಗ್ ನಲ್ಲಿ ಸುಮಾರು 1,700 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಇರೋ ಹಡಗಿನಲ್ಲಿ ಹಲವು ಮಂದಿಗೆ ಕೊರೊನಾ ವೈರಸ್ ತಗುಲಿರೋ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಾಂಕಾಂಗ್ ನಲ್ಲಿ ಹಡಗನ್ನು ತಟಕ್ಕೆ ಬಾರದಂತೆ ದಿಗ್ಬಂದನ ವಿಧಿಸಲಾಗಿದೆ.
ಹೀಗಾಗಿ ಸೋಮವಾರ ಮದ್ವೆ ಆಗ್ಬೇಕಿದ್ದ ವರ ಗೌರವ್ ಹಡಗಿನಲ್ಲಿ ಬಾಕಿಯಾಗಿದ್ದಾರೆ.