ಕುಂದಾಪುರ: ಇಲ್ಲಿನ ಸಂಚಾರಿ ಪೋಲಿಸ್ ಠಾಣೆಯ 59 ವರ್ಷದ ಹೆಡ್ ಕಾನ್ಸ್ಟೇಬಲ್ ಓರ್ವರಿಗೆ ಭಾನುವಾರ ಕೊರೋನಾ ಪಾಸಿಟಿವ್ ದೃಡಪಟ್ಟಿದೆ.
ಕೊರೋನಾ ಪಾಸಿಟಿವ್ ಹಿನ್ನೆಲೆ ಕುಂದಾಪುರ ಸಂಚಾರಿ ಪೋಲಿಸ್ ಠಾಣೆ ಹಾಗೂ ಸಿಬ್ಬಂದಿಯಿದ್ದ ಪೋಲಿಸ್ ಕ್ವಾಟ್ರಸ್ ಅನ್ನು ಸೀಲ್ ಡೌನ್ ಮಾಡಲಾಗಿದೆ. ಪೋಲಿಸ್ ಠಾಣೆಯನ್ನು ಸ್ಯಾನಿಟೈಜ್ ಮಾಡುವ ನಿಟ್ಟಿನಲ್ಲಿ ಠಾಣೆಯನ್ನು ತಾತ್ಕಾಲಿಕವಾಗಿ ಎರಡು ದಿನ ಅಲ್ಲೇ ಸಮೀಪವಿರುವ ಕುಂದಾಪುರ ಪ್ರವಾಸಿ ಮಂದಿರಕ್ಕೆ ಶಿಫ್ಟ್ ಮಾಡಲಾಗಿದೆ.
ಸದ್ಯ ಕೊರೋನಾ ಸೋಂಕು ದೃಡಪಟ್ಟ ಹೆಡ್ ಕಾನ್ಸ್ಟೇಬಲ್ ಅವರನ್ನು ಕುಂದಾಪುರ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.