ಕುಂದಾಪುರ: ಇನ್ನೊರ್ವ ಎಎಸ್ಐ ಸಿಬ್ಬಂದಿಗೆ ಕೊರೋನಾ ಸೋಂ

ಕುಂದಾಪುರ: ನಗರ  ಪೊಲೀಸ್ ಠಾಣೆಯ ಎಎಸ್ಐ ಒಬ್ಬರಲ್ಲಿ ಕೊರೋನಾ ಸೋಂಕು  ದೃಢವಾಗಿರುವುದರಿಂದ ಸ್ಯಾನಟೈಸ್ ಕಾರಣಕ್ಕಾಗಿ ಒಂದು ದಿನದ ಮಟ್ಟಿಗೆ ಪೊಲೀಸ್ ಠಾಣೆ ಸಮೀಪದ ಪ್ರವಾಸಿ ಮಂದಿರದಲ್ಲಿ ಕಾರ್ಯನಿರ್ವಹಿಸಿಲಿದೆ.
ಹೈವೇ ಪೆಟ್ರೋಲ್ ವಾಹನದಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಅವರ ಕರ್ತವ್ಯ ಪಾಳಿ ಜು.10 ಕ್ಕೆ ಮುಗಿದಿತ್ತು. ಇವರು ಕರ್ತವ್ಯ ನಿರ್ವಹಿಸುತ್ತಿದ್ದ ವಾಹನದಲ್ಲಿನ ಇನ್ನೊಂದು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಹಾಗೂ ಎಎಸ್ಐ ಅವರಿಗೆ ಸೋಂಕು ದೃಢವಾಗಿದ್ದ ಹಿನ್ನೆಲೆಯಲ್ಲಿ ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಶನಿವಾರ ಬಂದಿರುವ ವರದಿಯಲ್ಲಿ ಸೋಂಕು ದೃಢವಾಗಿದೆ.
ಸೋಂಕು ದೃಢವಾಗಿರುವ ಎಎಸ್ಐ ಅವರೊಂದಿಗೆ ಕೆಲ ದಿನಗಳ ಹಿಂದೆ ಠಾಣೆಯ ಪಿಎಸ್ಐ ಹಾಗೂ ಕೆಲ ಸಿಬ್ಬಂದಿಗಳ ಸಂಪರ್ಕವಾಗಿದ್ದರಿಂದಾಗಿ ಇವರುಗಳನ್ನು ಹೋಂ ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ.