ಉಡುಪಿ: ಜಿಲ್ಲೆಯ ಕೋಟದ ಲತಾ ಹೋಟೆಲ್ ಮಾಲೀಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಹೋಟೆಲ್ ಅನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹೋಟೆಲ್ ಮಾಲೀಕರಿಗೆ ಸೋಂಕು ದೃಢಪಟ್ಟಿದ್ದು, ಇದೀಗ ಹೋಟೆಲ್ ನಲ್ಲಿ ಉಪಹಾರ, ಊಟ ಪಾರ್ಸೆಲ್ ತೆಗೆದುಕೊಂಡ ಹೋದ ಗ್ರಾಹಕರಲ್ಲಿ ಹಾಗೂ ಸುತ್ತಮುತ್ತಲಿನ ಜನರಲ್ಲಿ ಆತಂಕ ಶುರುವಾಗಿದೆ.