ಕೊರೊನಾ: ಪಾಠ ಬೇಡ, ಆಟ ಬೇಕು!: ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಹೇಳುವುದೇನು?

ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ

ಇಂದು ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಚಚೆ೯ಯಾಗುತ್ತಿರುವ ವಿಶೇಷವೆಂದರೆ ಶಾಲಾ ಕಾಲೇಜುಗಳು ತೆರೆಯಬೇಕಾ? ಅಥವಾ ಬೇಡವೇ?ಸರಕಾರಕ್ಕಿಂತೂ ಇದು ನಂಬರ್ ಒನ್ ಚಿಂತೆಗೆ ಎಡಮಾಡಿ ಕೊಟ್ಟ ಸಂಗತಿಯೂ ಹೌದು.

ಮಾಧ್ಯಮಗಳಲ್ಲಿ ದಿನ ನಿತ್ಯವೂ ಇದರದ್ದೇ ಚಚೆ೯. ಶಿಕ್ಷಣ ತಜ್ಞರು ಸದ್ಯಕ್ಕೆ ಬೇಡವೆಂದರೆ. ಹೆತ್ತವರು ತಮ್ಮಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿಲ್ಲ ಎನ್ನುವ ಕುಾಗು ಇನ್ನೊಂದು ಕಡೆ. ಈ ಎಲ್ಲಾ ಕಥೆ ವ್ಯಥೆಗಳ ಮಧ್ಯೆ ಕೊರೊನಾದ ವಾಸ್ತವಿಕತೆಯ ವಿಚಾರವೇ ಬೇರೆ..!ಆಶ್ಚರ್ಯವಾದರೂ ಸತ್ಯ.

ಶಾಲೆ ಕಾಲೇಜುಗಳಿಗೆ ಹೇೂಗದ ಚಿಕ್ಕ ಚಿಕ್ಕ ಮಕ್ಕಳು ಶಾಲಾ ಕಾಲೇಜು ಮೈದಾನಗಳಲ್ಲಿ ಐವತ್ತು ಹೆಚ್ಚು ಮಕ್ಕಳು ಸಂಜೆ ಹೊತ್ತು ಯಾವುದೇ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರವೇ ಕಾಪಾಡದೆ ಬೆರೆತು ಆಡುವುದನ್ನು ನೇೂಡಿದರೆ ನಾವೇಕೆ ಶಾಲೆ ಆರಂಭಿಸಬಾರದು ಅನ್ನಿಸುತ್ತದೆ. ಹಾಗಾದರೆ ಪಾಠ ಕೇಳುವಾಗ ಕೊರೊನಾ ಹಿಡಿದುಕೊಳ್ಳುತ್ತದೆ ಹೊರತು ಆಟವಾಡುವಾಗ ಅಲ್ಲ. ಇದು ಹೆತ್ತವರ ಮನ:ಸ್ಥಿತಿಯೋ; ಬೇಜಬ್ದಾರಿತನವೊ?. ಮಕ್ಕಳ ನಿಲ೯ಕ್ಷವೊ?ಅನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಸರಕಾರವೇನೊ ಆದೇಶ ನೀಡಿದೆ ಸಾವ೯ಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸದಿದ್ದರೆ ಇನ್ನೂರು; ಸಾವಿರ ದಂಡ ಹಾಕಿ. ಹಾಗಾಗಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಸ್ಸು ನಿಲ್ದಾಣ, ಮಾರುಕಟ್ಟೆಯ ಯಂತಹ ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಶಾಲಾ ಕಾಲೇಜುಗಳ ಆಟದ ಮೈದಾನದಲ್ಲಿ ಸಂಜೆ ಹೊತ್ತು ಮಾಸ್ಕ ಧರಿಸದೇ ನಿರಾಳವಾಗಿ ಸ್ವಚ್ಛಂದದಿಂದ ಮೈ ಮರೆತು ಆಟವಾಡುವುದನ್ನು ನೇೂಡಿದರೆ ನಾವೆಷ್ಟು ಕೊರೊನಾ ತಡೆಯುವುದರಲ್ಲಿ ಆಸಕ್ತಿ ವಹಿಸುತ್ತಿದ್ದೇವೆ ಅನ್ನುವ ಸತ್ಯ ಅರಿವಾಗುತ್ತದೆ. ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಲಿ ಅನ್ನುವುದು ನಮ್ಮ ಮಕ್ಕಳ ಹಿತ ದೃಷ್ಟಿಯ ಕೇೂರಿಕೆಯೂ ಹೌದು.

ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕರು, ಉಡುಪಿ.