ಉಡುಪಿ: ಕೊರೋನಾ ಅಲರ್ಟ್: ಮಾ. 31 ರ ವರೆಗೆ ಗ್ರಂಥಾಲಯ ಸೇವೆ ಬಂದ್

ಉಡುಪಿ: ಕೊರೋನಾ ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರದ ಆದೇಶದಂತೆ ಹಾಗೂ ಇಲಾಖಾ ನಿರ್ದೇಶಕರ ಸೂಚನೆ ಮೇರೆಗೆ ನಗರ ಕೇಂದ್ರ ಗ್ರಂಥಾಲಯ, ಕೆ. ಎಂ. ಮಾರ್ಗ ಉಡುಪಿಯ ಮುಖ್ಯ ಶಾಖೆ ಹಾಗೂ ಇದರ ವ್ಯಾಪ್ತಿಯಲ್ಲಿ ಬರುವ ಶಾಖಾ ಗ್ರಂಥಾಲಯಗಳಲ್ಲಿ ಮಾ. 31 ರವರೆಗೆ ಸಾರ್ವಜನಿಕ ಓದುಗರಿಗೆ ತಾತ್ಕಾಲಿಕವಾಗಿ ಗ್ರಂಥಾಲಯದ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಪುಸ್ತಕ ಎರವಲು ಸೇವೆಯನ್ನು ಮಾತ್ರ ನೀಡಲಾಗುವುದು ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ  ತಿಳಿಸಿದ್ದಾರೆ.