ಉಡುಪಿ: ಮುಂದುವರಿದ ಕೊರೊನಾ ಪ್ರಕರಣ; ಆರು ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್್ರಕರಣಗಳು   ಮುಂದುವರಿದಿದ್ದು, ಗುರುವಾರ ಜಿಲ್ಲೆಯಲ್ಲಿ 1526 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 5061ಕ್ಕೆ ಏರಿಕೆಯಾಗಿದೆ.

ಉಡುಪಿ ತಾಲ್ಲೂಕಿನಲ್ಲಿ ಅತೀ ಹೆಚ್ಚು 682, ಕುಂದಾಪುರ 595, ಕಾರ್ಕಳ 242 ಹಾಗೂ ಹೊರ ಜಿಲ್ಲೆಯ ಏಳು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಮೇ 5ರಂದು 3095 ಮಂದಿಯನ್ನು ಕೊರೊನಾ ಪರೀಕ್ಷೆ ಒಳಪಡಿಸಲಾಗಿದೆ. 384 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 6 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಉಡುಪಿ ತಾಲೂಕಿನ 87 ವರ್ಷದ ವೃದ್ಧ, 69 ವ್ಯಕ್ತಿ, 47 ವರ್ಷದ ಮಹಿಳೆ, 72 ವರ್ಷದ ವೃದ್ದ, ಕಾರ್ಕಳ ತಾಲೂಕಿನ 62 ವರ್ಷದ ಮಹಿಳೆ ಹಾಗೂ ಕುಂದಾಪುರ ತಾಲೂಕಿನ 64 ವರ್ಷದ ಪುರುಷ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 520490 ಮಂದಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 36892 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ವರೆಗೆ ಜಿಲ್ಲೆಯಲ್ಲಿ 31619 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ  ಜಿಲ್ಲೆಯಲ್ಲಿ 212 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರ